backತೇಜಸ್ವೀ ಸೂರ್ಯback

ತೇಜಸ್ವೀ ಸೂರ್ಯ

@tejasvi_surya

ಸಂಸದರು,(ಬೆಂಗಳೂರು ದಕ್ಷಿಣ)

ಶ್ರೀ ತೇಜಸ್ವೀ ಸೂರ್ಯ, ಸಂಸದರು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ, ವಕೀಲರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು (ಬಿಜೆಪಿ ಯುವ ಮೋರ್ಚಾ-ಕರ್ನಾಟಕ)

calender July 2020 ನಲ್ಲಿ ಸೇರಿಕೊಂಡರು

ಕೂಸ್ (43)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
ಸಂಸದರು,(ಬೆಂಗಳೂರು ದಕ್ಷಿಣ)
ಎಲ್ಲರಿಗೂ ನಾಡಹಬ್ಬ ದಸರಾ ಹಾಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿ ನಮ್ಮೆಲ್ಲರಿಗೂ ಆಯಸ್ಸು, ಆರೋಗ್ಯ, ಐಶ್ವರ್ಯ, ಮನಃಶಾಂತಿಯನ್ನು ನೀಡಲಿ ಎಂದು ಹಾರೈಸುತ್ತೇನೆ.
re1
like33
WhatsApp
img
ಸಂಸದರು,(ಬೆಂಗಳೂರು ದಕ್ಷಿಣ)
ಮಾನ್ಯ ಗೃಹ ಸಚಿವರಾದ ಶ್ರೀ ಬಸವರಾಜ್ ಬೊಮ್ಮಾಯಿ ರವರೊಂದಿಗೆ ಸುದ್ದಿ ವಾಹಿನಿ 'ಟಿ ವಿ 9' ವತಿಯಿಂದ ಆಯೋಜಿಸಲಾಗಿದ್ದ 'ಡ್ರಗ್ಸ್ ಬೇಡ ಕರ್ನಾಟಕ' ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವಜನತೆಯ ಮೇಲೆ ಡ್ರಗ್ಸ್ ಪ್ರಭಾವ ಹಾಗೂ ಈ ಪಿಡುಗು ನಿರ್ಮೂಲನೆ ಕುರಿತು ಮಾತನಾಡಿದೆ. ಇದೇ ಸಂದರ್ಭದಲ್ಲಿ ಮಂಡ್ಯ ಸಂಸದರಾದ ಶ್ರೀಮತಿ ಸುಮಲತಾ ಅಂಬರೀಶ್, ಬಿಜೆಪಿ ಮುಖಂಡರಾದ ಶ್ರೀ ಲೇಹರ್ ಸಿಂಗ್, ಟಿವಿ 9 ಸುದ್ದಿವಾಹಿನಿಯ ಶ್ರೀ ರಂಗನಾಥ್ ಭಾರದ್ವಾಜ್, ಚಿತ್ರ ನಟರಾದ ಶ್ರೀ ಅಜಯ್ ರಾವ್ ಉಪಸ್ಥಿತರಿದ್ದರು.
re2
like21
WhatsApp
img
ಸಂಸದರು,(ಬೆಂಗಳೂರು ದಕ್ಷಿಣ)
2 ಘಂಟೆಗೂ ಅಧಿಕ ಸಮಯವನ್ನು ಪೊಲೀಸ್ ಠಾಣೆಯಲ್ಲಿ ಕಳೆದರೂ ಸಹ ಎಫ್.ಐ. ಆರ್. ನಮೂದಿಸಲು ನಿರಾಕರಿಸಿರುವ ಪೊಲೀಸ್ ಅಧಿಕಾರಿಗಳು ಟಿ.ಎಂ.ಸಿ ಪಕ್ಷದ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತಿರುವುದು ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಯಾವ ಮಟ್ಟಕ್ಕೆ ಕುಸಿದಿದೆ ಎನ್ನುವುದನ್ನು ತಿಳಿಸುತ್ತದೆ. ಲೋಕಸಭೆಯ 3 ಸಂಸತ್ ಸದಸ್ಯರನ್ನು ಎಳೆದಾಡಿದ್ದು, ಈ ನಿಟ್ಟಿನಲ್ಲಿ ಸಾಂವಿಧಾನಿಕ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿರುವ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಿಯೇ ತೀರುತ್ತೇವೆ.
play
re2
like23
WhatsApp
img
ಸಂಸದರು,(ಬೆಂಗಳೂರು ದಕ್ಷಿಣ)
ಇಂದು ಬಂಗಾಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕರ್ನಾಟಕದ ಹೆಮ್ಮೆಯ ಐ ಎ ಎಸ್ ಅಧಿಕಾರಿ ಶ್ರೀ ಕೆಂಪಹೊನ್ನಯ್ಯ ರವರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದೆ. ಮೂಲತಃ ಕರ್ನಾಟಕದವರಾಗಿರುವ ಶ್ರೀ ಕೆಂಪಹೊನ್ನಯ್ಯ ನವರು, ದೃಷ್ಟಿ ಸವಾಲು ಹೊಂದಿದ್ದು ಪ್ರಸ್ತುತ ಐ ಎ ಎಸ್ ಅಧಿಕಾರಿಯಾಗಿ ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2017ರ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 340ನೇ ಸ್ಥಾನ ಪಡೆಯುವ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.
re
like27
WhatsApp
img
ಸಂಸದರು,(ಬೆಂಗಳೂರು ದಕ್ಷಿಣ)
ಸರ್ಕಾರದಿಂದ ಸೂಚಿಸಲಾಗಿರುವ ಕೋವಿಡ್ ರೋಗಿಗಳಿಗೆ ಖಾಸಗೀ ಆಸ್ಪತ್ರೆಗಳಲ್ಲಿ ಸೂಕ್ತ ಸೌಲಭ್ಯ ದೊರಕದಿರುವ ಕುರಿತು ದೂರುಗಳು ಬಂದ ನಂತರ ಜಯನಗರದ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ರೋಗಿಗಳಿಗೆ ಧೈರ್ಯವಾಗಿರುವಂತೆ ತಿಳಿಸಿ, ಗುಣಮುಖರಾದ ರೋಗಿಗಳು ಪ್ಲಾಸ್ಮಾ ದಾನ ಮಾಡಿ,ಇತರ ರೋಗಿಗಳಿಗೆ ಸಹಾಯವಾಗುವಂತೆ ತಿಳಿಸಿದೆ.
play
re4
like72
WhatsApp
img
ಸಂಸದರು,(ಬೆಂಗಳೂರು ದಕ್ಷಿಣ)
ನನ್ನ ಕರ್ನಾಟಕವು, ಭಾರತದಲ್ಲಿ 'ಧರ್ಮ'ದ ಪುನರುತ್ಥಾನದ ಸಂಕಲ್ಪ ತೊಟ್ಟಿದ್ದ ವಿಜಯನಗರ ಸಾಮ್ರಾಜ್ಯದ ನಾಡು. ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡ ನಂತರ ಪ್ರಥಮ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಬೆಂಗಳೂರಿನ ಯುವಕ ಎನ್ನುವುದಕ್ಕೆ ಹೆಮ್ಮೆಯಾಗುತ್ತಿದೆ. ಧನ್ಯವಾದಗಳು ಬೆಂಗಳೂರು !
play
re2
like90
WhatsApp
img
ಸಂಸದರು,(ಬೆಂಗಳೂರು ದಕ್ಷಿಣ)
ರೈತರು ತಾವು ಕೃಷಿಗೆ ಬಳಸುವ ವಸ್ತುಗಳನ್ನು ಪೂಜಿಸುತ್ತಾರೆ. ಯಾವೊಬ್ಬ ನೈಜ ರೈತನೂ ಸಹ ತನ್ನ ಟ್ರಾಕ್ಟರ್ ಗೆ ಬೆಂಕಿ ಹಚ್ಚುವುದಿಲ್ಲ. ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ರೈತರ ಮೇಲೆ ನೈಜ ಕಾಳಜಿ ಇದ್ದಿದ್ದರೆ, ಅದೇ ಟ್ರಾಕ್ಟರ್ ಅನ್ನು ಯಾರಾದರೂ ಬಡ ರೈತರಿಗೆ ದಾನ ಮಾಡಬಹುದಿತ್ತು.! ! ಅದ್ಹೇಗೆ ಸಾಧ್ಯ.? ಧ್ವಂಸಗೊಳಿಸುವುದೇ ಅವರ ನೈಜ ಪ್ರವೃತ್ತಿ.
play
re5
like75
WhatsApp
img
ಸಂಸದರು,(ಬೆಂಗಳೂರು ದಕ್ಷಿಣ)
ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರು ನಗರವು ಉಗ್ರಗಾಮಿ ಕೃತ್ಯಗಳ, ಸ್ಲೀಪರ್ ಸೆಲ್ ಕೇಂದ್ರವಾಗಿ ಪರಿಣಮಿಸುತ್ತಿದ್ದು, ಹಲವಾರು ಎನ್ ಐ ಎ ದಾಳಿಗಳು ಇದನ್ನು ಪುಷ್ಟೀಕರಿಸುತ್ತವೆ. ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ರವರಲ್ಲಿ ಮನವಿ ಸಲ್ಲಿಸಿ, ರಾಷ್ಟ್ರೀಯ ತನಿಖಾ ದಳ(ಎನ್.ಐ. ಎ)ದ ಶಾಶ್ವತ ಕಚೇರಿಯನ್ನು ಬೆಂಗಳೂರಿನಲ್ಲಿ ಆರಂಭಿಸುವಂತೆ ಒತ್ತಾಯಿಸಿದ್ದು, ಶೀಘ್ರವೇ ಕಚೇರಿ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿರುವ ಗೃಹ ಸಚಿವರು ಈ ಕುರಿತು ಸಕಾರಾತ್ಮಕ ಸ್ಪಂದನೆ ಒದಗಿಸಿರುತ್ತಾರೆ.
re8
like111
WhatsApp
img
ಸಂಸದರು,(ಬೆಂಗಳೂರು ದಕ್ಷಿಣ)
ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷನನ್ನಾಗಿ, ನನ್ನಂತಹ ಒಬ್ಬ ಸಾಮಾನ್ಯ ಯುವ ಕಾರ್ಯಕರ್ತನನ್ನು ಆಯ್ಕೆ ಮಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ , ಶ್ರೀ ಅಮಿತ್ ಶಾ, ಬಿಜೆಪಿ ಅಧ್ಯಕ್ಷರಾದ ಶ್ರೀ ಜೆ ಪಿ ನಡ್ಡಾ ಹಾಗೂ ಸಂಘಟನೆಯ ಎಲ್ಲ ಹಿರಿಯರಿಗೆ ನನ್ನ ಪ್ರಣಾಮಗಳು.ಮೊದಲ ಬಾರಿಗೆ ಇಡೀ ದೇಶದ ಯುವಕರ ಸೇವೆ, ಸಂಘಟನೆ ಮಾಡುವ ಅವಕಾಶ ಒಬ್ಬ ಕನ್ನಡದ ಯುವಕನಿಗೆ ಸಿಕ್ಕಿರುವುದು ಸಮಸ್ತ ಕನ್ನಡಿಗರ ಆಶೀರ್ವಾದ ಎಂದೇ ನಾನು ಪರಿಗಣಿಸುತ್ತೇನೆ.
re3
like105
WhatsApp
img
ಸಂಸದರು,(ಬೆಂಗಳೂರು ದಕ್ಷಿಣ)
ಸಂಗೀತದ ಮೇರು ಪರ್ವತ, ರಾಗ, ಹಾಡುಗಳ ವಿಶ್ವವಿದ್ಯಾಲಯ, ಭಾರತೀಯರ ಪ್ರತಿನಿತ್ಯದ ಬದುಕಿನಲ್ಲಿ ತಮ್ಮ ಅಪ್ರತಿಮ ಧ್ವನಿಯ ಮೂಲಕ ಆವರಿಸಿಕೊಂಡಿದ್ದ ಗಾನ ಗಾರುಡಿಗ ಶ್ರೀ ಎಸ್ ಪಿ ಬಾಲಸುಬ್ರಹ್ಮಣ್ಯಂ ರವರ ಅಕಾಲಿಕ ನಿಧನದಿಂದ ಭಾರತೀಯ ಸಂಗೀತ ಲೋಕದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ. ಸಾವಿರಾರು ಹಾಡುಗಳ ಮುಖಾಂತರ ಎಸ್ ಪಿ ಬಿ ನಮ್ಮೊಂದಿಗೆ ಅಮರರಾಗಿರಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುವೆ. ಓಂ ಶಾಂತಿ. ಸದ್ಗತಿ. https://youtu.be/Dajcwrykmf8
play
re7
like100
WhatsApp
ask