koo-logo
koo-logo
back
ಸುದರ್ಶನ್ ಹಾರ್ನಳ್ಳಿ
shareblock

ಸುದರ್ಶನ್ ಹಾರ್ನಳ್ಳಿ

@sudarshan

Community Manager - Koo

ಕೂ ಕನ್ನಡದ ಸಿಪಾಯಿ. ಉಸಿರಲೂ ಜಪಿಸುತಿರುವೆ ಮಂತ್ರವ, ಎಳೆಯುವಾಗ ಕನ; ಬಿಡುವಾಗ ನಡ; ಅದುವೇ ಕನ್ನಡ. 💛❤

calender Joined on Feb 2020

KooKooKoo(2098)
LikedLikedLiked(399489)
Re-Koo & CommentRe-Koo & CommentRe-Koo & Comment(39612)
img
@sudarshan

Community Manager - Koo

ಪ್ರತಿಯೊಂದು ಹೆಣ್ಣು ಸಹ ಮಾದರಿ. ಗೃಹಿಣಿಯಾಗಿರಲಿ, ವೃತ್ತಿಪರರಾಗಿರಲಿ, ಪ್ರತಿಯೊಬ್ಬರ ಶ್ರಮ ಅಪಾರ. ಕುಟುಂಬ ಹಾಗೂ ಸಮಾಜ ಕಟ್ಟುವಲ್ಲಿ ಅವರ ಪಾತ್ರ ಬಹಳ ದೊಡ್ಡದು. #ಮಾದರಿಹೆಣ್ಣು
commentcomment
8
img
@sudarshan

Community Manager - Koo

ರಾಜ್ಯದಲ್ಲಿ ಒಮಿಕ್ರಾನ್ ಸಮುದಾಯಕ್ಕೆ ಹಬ್ಬುತ್ತಿರುವುದು ಸತ್ಯ, ಪ್ರತಿ ಮನೆಯಲ್ಲೂ ಶೀತ, ಕೆಮ್ಮು ಮತ್ತು ಜ್ವರದ್ದೇ ಕಾರುಬಾರು, ಯಾರೂ ಭಯಪಡುವ ಅಗತ್ಯ ಇಲ್ಲ. ತೀವ್ರತೆ ಜಾಸ್ತಿಯಾಗಿದ್ದರೆ ಆಸ್ಪತ್ರೆಗೆ ಭೇಟಿಕೊಡಿ. #ಒಮಿಕ್ರಾನ್
commentcomment
3
img
@sudarshan

Community Manager - Koo

1999 ರಲ್ಲಿ ಹೀರೋ ಆಗಿ ಲಾಂಚ್ ಆಗಿದ್ದೆ! ನೇರ ಪ್ರದರ್ಶನ! ನಾನೇ ಹಾಡ್ತಾ ನಾನೇ ಕುಣಿಬೇಕು, ಬ್ಯಾಗ್ರೌಂಡ್ ನಲ್ಲಿ ಕೊರಸ್ ಹಾಡಿ ಡ್ಯಾನ್ಸ್ ಮಾಡೋರು, ಪಕ್ಕದಲ್ಲಿ ನನ್ಗಿಂತ ಹೈಟ್ ಇರೋ ಹೀರೋಯಿನ್. (ಈಗ ಶಿವಣ್ಣನ ನೋ ಪ್ರಾಬ್ಲಮ್ ಹಾಡು ನೆನಪಾಗುತ್ತೆ) ಹೆಂಗೆ ನಾವು? 😅 #ಹಳೆಆಲ್ಬಂ
commentcomment
10
img
@sudarshan

Community Manager - Koo

ಕೂ ಕಲಾ ಜಗುಲಿ 7.0 ನಿಮ್ಮ ಪ್ರತಿಭೆಯನ್ನು ಹೊರತನ್ನಿ, ಕಲೆಯ ಆರಾಧಕರಿಗೆ ಇದು ಮುಕ್ತ ಆಹ್ವಾನ, ಬನ್ನಿ ಪಾಲ್ಗೊಳ್ಳಿ. ದಿನಾಂಕ: ಬುಧವಾರ, 26 ಜನವರಿ 2022, ಸಂಜೆ 6 ರಿಂದ 7 ಗಂಟೆಯವರೆಗೆ. ಸೂಚನೆ: ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮೊದಲು ಫಾರಂ ಭರ್ತಿ ಮಾಡಿ. ಗೂಗಲ್ ಫಾರಂ: https://forms.gle/cRxw8UKCCHPRhQA49 ಜೂಮ್ ಮೀಟ್ ಲಿಂಕ್: https://zoom.us/j/92595085092 #ಕೂಕಲಾಜಗುಲಿ
commentcomment
1
img
@sudarshan

Community Manager - Koo

ಕರುನಾಡಿನ ಹೆಮ್ಮೆಯ ಪುತ್ರ, ಕಿತ್ತೂರಿನ ಬಂಟ, ರಾಜ್ಯಕ್ಕಾಗಿ ಹೋರಾಡಿ ಹುತಾತ್ಮನಾದ ಸಂಗೊಳ್ಳಿ ರಾಯಣ್ಣ ನನ್ನ ನೆಚ್ಚಿನ ವೀರ. #ಸ್ವಾತಂತ್ರ್ಯವೀರ #ಸಂಗೊಳ್ಳಿರಾಯಣ್ಣ
commentcomment
4
img
@sudarshan

Community Manager - Koo

ಹಿಂದೆ ಹುಲಿ ಅರಣ್ಯದ ಸಮತೋಲನದಲ್ಲಿ ದೊಡ್ಡ ಪಾತ್ರ ವಹಿಸುತ್ತಿತ್ತು, ಕಾಡು ಕ್ಷೀಣಿಸುತ್ತಾ, ಬೇಟೆಗಾರರ ಗುಂಡಿಗೆ ಸತ್ತವೆಷ್ಟೋ. ಈಗ ಅವುಗಳನ್ನು ಸಂರಕ್ಷಿಸಬೇಕಾದ ಅನಿವಾರ್ಯತೆ ಹೆಚ್ಚಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಸಮಿತಿಯಿಂದ ದೇಶದಾದ್ಯಂತ ನಡೆಯಲಿರುವ ಹುಲಿಗಣತಿಗೆ ಸಿದ್ಧತೆ ನಡೆಸಿದೆ. ಹುಲಿಯ ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸೋಣ. #ಹುಲಿಗಣತಿ
commentcomment
2
img
@sudarshan

Community Manager - Koo

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಯುತ್ತಿರುವುದು ಸಂತಸದ ವಿಷಯ ಜೊತೆಗೆ ಜನರ ಜೀವಕ್ಕೆ ಹೆಚ್ಚು ಅಪಾಯವಿಲ್ಲದಿರುವುದು ಒಂದಿಷ್ಟು ನೆಮ್ಮದಿ ತಂದಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲವೂ ಸಂಪೂರ್ಣ ಸುಧಾರಿಸಿದರೆ ಚೆನ್ನ. #ಕೊರೊನಾಇಳಿಕೆ
commentcomment
4
img
@sudarshan

Community Manager - Koo

ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಅವರಿಗೆ ಶತಶತ ನಮನಗಳು. ಅವರ ನೆನಪಿಗೆ ’ಪರಾಕ್ರಮ ದಿನ’ ಎಂದು ಆಚರಿಸುವ ಈ ದಿನ ಪ್ರತಿಯೊಬ್ಬ ಭಾರತೀಯರಿಗೂ ಧೈರ್ಯ, ಸ್ವಾಭಿಮಾನವನ್ನು ತುಂಬುತ್ತಿದೆ. #ನೇತಾಜಿ #ಪರಾಕ್ರಮದಿವಸ
commentcomment
7
img
@sudarshan

Community Manager - Koo

#ನನ್ನಸಹಪಾಠಿ ಓದೋಕಷ್ಟೆ ಅಲ್ಲಾ, ಅಳೋಕು ಹೆಗಲು ಬೇಕು, ತಪ್ಪಾದಾಗ ತಿದ್ದುವ ಗುರುವಾಗಿರಬೇಕು, ಕೋಟಿ ಕನಸುಗಳಿಗೆ ಜೊತೆಯಾಗಬೇಕು, ದೂರಾದರೂ ನೆನಪುಗಳು ಕಾಡುವಂತಿರಬೇಕು!
commentcomment
4
img
@sudarshan

Community Manager - Koo

ಮಣ್ಣಲ್ಲೇ ಹುಟ್ಟಿ, ಮತ್ತೆ ಮಣ್ಣಾಗುವ, ಈ ಬದುಕಿನ ತತ್ವದಲ್ಲೇ, ನೀ ಯಾರನ್ನು ಗೆಲ್ಲುವುದಿಲ್ಲ, ನೀ ಯಾರನ್ನು ಸೋಲಿಸುವುದಿಲ್ಲ, ನೀ ಬಿಟ್ಟು ಹೋಗುವುದೂ ನಿನ್ನದಲ್ಲ! ನೀ ಬಿಟ್ಟು ಹೋಗುವುದೂ ನಿನ್ನದಲ್ಲ, ನೀ ಯಾರನ್ನು ಸೋಲಿಸುವುದಿಲ್ಲ, ನೀ ಯಾರನ್ನು ಗೆಲ್ಲುವುದಿಲ್ಲ, ಈ ಬದುಕಿನ ತತ್ವದಲ್ಲೇ, ಮತ್ತೆ ಮಣ್ಣಾಗುವ, ಮಣ್ಣಲ್ಲೇ ಹುಟ್ಟಿ! #ನನ್ನದೇನಿಲ್ಲ
commentcomment
9
create koo