backಸಂಗಮೇಶ್ ಹಿರೇಮಠ್back

ಸಂಗಮೇಶ್ ಹಿರೇಮಠ್

@sangam

ಹವ್ಯಾಸಿ ಬರಹಗಾರ • ಅಲೆಮಾರಿ

ಕನ್ನಡಿಗ | ರಾಷ್ಟೀಯವಾದಿ | ಲೋಹಶಾಸ್ತ್ರ ಇಂಜಿನಿಯರ್ |

calender Feb 2020 ನಲ್ಲಿ ಸೇರಿಕೊಂಡರು

ಕೂಸ್ (993)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
ಹವ್ಯಾಸಿ ಬರಹಗಾರ • ಅಲೆಮಾರಿ
#ಭಾನುವಾರ_ಸಮಾಚಾರ #ಭಾನುವಾರದ_ಸಮಾಚಾರ ಆತ್ಮೀಯರೇ, ಈ ವಾರದ ವಿಷಯ #ಕನ್ನಡ_ರಾಜ್ಯೋತ್ಸವ ಕನ್ನಡ, ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ಹಲವಾರು ವಿಷಯಗಳ ಕುರಿತು ತಿಳಿಸಿ, ನಮ್ಮೆಲ್ಲರ ನೆಚ್ಚಿನ ರಾಜ್ಯೋತ್ಸವದ ಬಗ್ಗೆ ನಾಳೆ ಕೂ ಮಾಡುವುದರ ಮೂಲಕ ತಿಳಿಸಿ ಮತ್ತು #ಭಾನುವಾರ_ಸಮಾಚಾರ ಎಂದು ಹ್ಯಾಷ್ ಟ್ಯಾಗ್ ಮತ್ತು @sangam ಎಂದು ಟ್ಯಾಗ್ ಮಾಡಿ. ಆಸಕ್ತಿ ಇರುವ ಅನೇಕರಿಗೆ ಈ ಬಗ್ಗೆ ತಿಳಿಯಲು ಈ ಕೂ ಅನ್ನು ರಿಕೂ ಮಾಡಿ. ಧನ್ಯವಾದ
re4
like29
WhatsApp
img
ಹವ್ಯಾಸಿ ಬರಹಗಾರ • ಅಲೆಮಾರಿ
ನಮ್ಮ ಭಾವನೆಗಳು ಮತ್ತು ವಾಸ್ತವತೆಯ ನಡುವಿನ ಒಡಂಬಡಿಕೆಯಾಗಿದೆ ಈ ನಮ್ಮ ಜೀವನ. ಜೀವನದ ಕೆಲವು ಹಂತಗಳಲ್ಲಿ ನಾವು ನಮ್ಮ ಭಾವನೆಗಳನ್ನು ತೊರೆದು ವಾಸ್ತವತೆಯನ್ನು ಸ್ವೀಕರಿಸಲೇಬೇಕು.. #ಮುಂಜಾನೆ_ಮಾತು #ಶುಭದಿನ
re
like22
WhatsApp
img
ಹವ್ಯಾಸಿ ಬರಹಗಾರ • ಅಲೆಮಾರಿ
ಕಿಟಕಿಗಳು ಮುಚ್ಚಿರುವ ನಮ್ಮದೇ ಕಾರುಗಳ ಒಳಗೆ, ಒಬ್ಬೊಬ್ಬರೇ ಕುಳಿತಿದ್ದರೂ, ಜನಸಾಮಾನ್ಯರು ಮಾಸ್ಕ್ ಧರಿಸಿರಬೇಕು. ಆದರೆ ರಾಜಕೀಯ ಪಕ್ಷಗಳಿಗೆ ಯಾವುದೇ ಕೊರೋನಾ ನಿಯಮಗಳು ಅನ್ವಯಿಸುವುದಿಲ್ಲ. ಅವರೆಲ್ಲಾ ಬೇಕಾಬಿಟ್ಟಿಯಾಗಿ ಸಭೆ ಸೇರಬಹುದು, ಹೇಗೆ ಬೇಕೋ ಹಾಗೆ ಚುನಾವಣಾ ಪ್ರಚಾರ ನಡೆಸಬಹುದು. ಮಾಸ್ಕ್ ಗಳನ್ನು ಹಾಕದೇ, ಯಾವುದೇ ರೀತಿಯ ಸೋಷಿಯಲ್ ಡಿಸ್ಟೆನ್ಸ್ ಕಾಯ್ದುಕೊಳ್ಳದೇ‌ ಬೀದಿ ಬೀದಿಗಳಲ್ಲಿ ರೋಡ್ ಶೋ ಮಾಡಿ ಕೊರೋನವನ್ನು, ಕ್ಷೇತ್ರದ ಮನೆ ಮನೆಯ ಬಾಗಿಲಿಗೂ‌ ಕೊಂಡೊಯ್ದು ಬಿಟ್ಟು ಬರಬಹುದು. 😏
re
like26
WhatsApp
img
ಹವ್ಯಾಸಿ ಬರಹಗಾರ • ಅಲೆಮಾರಿ
ನಾವು ಬೇರೆಯವರಿಂದ ಹೆಚ್ಚಾಗಿ ಬಯಸುವುದು ನಮ್ಮಲ್ಲಿ ಇಲ್ಲದುದನ್ನು. ಇತರರ ಮಾತನ್ನು ಆಲಿಸಲು ನಮ್ಮೊಳಗೆ ತಾಳ್ಮೆ ಇಲ್ಲದಾಗ, ಅವರು ನಮ್ಮ ಮಾತನ್ನು ತಾಳ್ಮೆಯಿಂದ ಕೇಳಬೇಕು ಎಂದು ಬಯಸುತ್ತೇವೆ.. #ಮುಂಜಾನೆ_ಮಾತು #ಶುಭದಿನ!
re1
like68
WhatsApp
img
ಹವ್ಯಾಸಿ ಬರಹಗಾರ • ಅಲೆಮಾರಿ
ಮನಸ್ಸು ಅತ್ಯಂತ ಫಲವತ್ತಾದ ಜಾಗ. ಅಲ್ಲಿ ನೀವು ಸ್ನೇಹ, ಪ್ರೇಮ, ದ್ವೇಷ, ಮತ್ಸರ, ಸೌಹಾರ್ದ, ದಯೆ ನೀವು ಏನನ್ನೇ ಬಿತ್ತಿದರೂ ಸೊಂಪಾಗಿ ಬೆಳೆಯುತ್ತದೆ. ಅದರಲ್ಲಿ ಬಿಡುವ ಫಲವನ್ನು ಮುಂದೊಂದು ದಿನ ನಾವು ತಿನ್ನಲೇ ಬೇಕಿರುವುದು ಕಡ್ಡಾಯ . ಆದ್ದರಿಂದ ಬಿತ್ತುವಾಗಲೇ ಫಲದ ಬಗ್ಗೆ ಕೊಂಚ ಎಚ್ಚರವಿರಲಿ.. #ಮುಂಜಾನೆ_ಮಾತು #ಶುಭದಿನ
re
like58
WhatsApp
img
ಹವ್ಯಾಸಿ ಬರಹಗಾರ • ಅಲೆಮಾರಿ
ದೇವರು ನಮಗೆ ಏನು ಕೊಟ್ಟಿದ್ದಾರೆ, ಕೊಟ್ಟಿಲ್ಲ ಎನ್ನುವುದು ಮುಖ್ಯವಲ್ಲ. ನಮಗಾಗಿ ಕೊಟ್ಟಿರುವುದನ್ನು ನಾವು ಹೇಗೆ ಬಳಸಿಕೊಂಡಿದ್ದೇವೆ ಎನ್ನುವುದೇ ಮುಖ್ಯ.. #ಮುಂಜಾನೆ_ಮಾತು #ಶುಭದಿನ
re
like45
WhatsApp
img
ಹವ್ಯಾಸಿ ಬರಹಗಾರ • ಅಲೆಮಾರಿ
ಎಲ್ಲಾ ಭ್ರಷ್ಟ ಸರ್ಕಾರಿ ನೌಕರರೊಳಗೂ ಒಬ್ಬ "Undertaker" ಇರ್ತಾನೆ. ಟೇಬಲ್ under ದುಡ್ಡು taking ಮಾಡೋವಾಗ ಮಾತ್ರ ಆಕ್ಟಿವೇಟ್ ಆಗ್ತಾನೆ 😏
re
like29
WhatsApp
img
ಹವ್ಯಾಸಿ ಬರಹಗಾರ • ಅಲೆಮಾರಿ
ಫ್ರೆಂಡ್ ಒಬ್ರು ಪ್ರತಿವರ್ಷ ದಸರಾ ಹಬ್ಬಕ್ಕೆ ಪೂಜೆಗೆ ಆಮಂತ್ರಣ ಕೊಡುತ್ತಿದ್ದರು. ಈ ಬಾರಿಯೂ ಕರೆದಿದ್ದರು, ಹೋಗಿದ್ದೆ. ಪ್ರತಿವರ್ಷ ಆಕರ್ಷಕ ವಿಧವಿಧದ ಬೊಂಬೆಗಳನ್ನು ಕೂರಿಸುತ್ತಿದ್ದರು, ಈ ವರ್ಷ ಸರಳವಾಗಿ ಪೂಜೆ ಮಾಡಿದ್ದರು. ನಾನೂ ಇದರ ಬಗ್ಗೆ ಕೇಳುವ ಅಂದುಕೊಂಡೆ ಆದರೆ ಕೇಳಲಿಲ್ಲ. ಇನ್ನೇನು ಅವರ ಮನೆಯಿಂದ ಹೊರಡಬೇಕು, "ನಮ್ಮ ಮನೆಯಲ್ಲಿ ಈ ಬಾರಿ ಬೊಂಬೆಗಳ ಕೂರಿಸಿಲ್ಲ, ಕೋರೋನ ಕಾರಣದಿಂದಾಗಿ ನಾವೇ ಮನೆಯಲ್ಲಿ ಕೂತಿದ್ದೇವೆ, ಇನ್ನೆಲ್ಲಿ ಬೊಂಬೆಗಳನ್ನು ಕೂಡಿಸೋದು ಅಲ್ವಾ?" ಎಂದು ನಕ್ಕರು..
re
like37
WhatsApp
img
ಹವ್ಯಾಸಿ ಬರಹಗಾರ • ಅಲೆಮಾರಿ
ನಮ್ಮಯ ಈ ದಸರಾ., ಮಾಡಲಿ ನಮ್ಮೊಳಗಿನ ನಾನತ್ವದ ಸಂಹಾರ.. ಎಲ್ಲರಿಗೂ ದಸರಾ ಮತ್ತು ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಷಯಗಳು 🙏😊💐 #ದಸರಾ #ನಾಡಹಬ್ಬ #ಶುಭದಿನ
re
like27
WhatsApp
img
ಹವ್ಯಾಸಿ ಬರಹಗಾರ • ಅಲೆಮಾರಿ
#ಭಾನುವಾರ_ಸಮಾಚಾರ #ಭಾನುವಾರದ_ಸಮಾಚಾರ #ನಾಡಹಬ್ಬ ದ ಕೂ ಮಾಡಿ, ದಸರಾ ಹಬ್ಬದ ಮಹತ್ವ, ಇತಿಹಾಸ, ಆಚರಣೆ ಮತ್ತು ಮತ್ತಿತರ ಅನೇಕ ದಸರಾ ಹಬ್ಬದ ಕುರಿತಾದ ವಿಷಯಗಳ ಕುರಿತು ತಿಳಿಸಿದ್ದೀರಿ. ಈ ವಿಷಯವನ್ನು ಆಯ್ಕೆ ಮಾಡಿದ @chanjois ಅವರಿಗೆ ಮತ್ತು ವಿಷಯದ ಕುರಿತು ಕೂ ಮಾಡಿದ ಎಲ್ಲರಿಗೂ ಹೃತೂರ್ವಕ ಧನ್ಯವಾದಗಳು.. ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರೆಯಲಿ. ಸರ್ವರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಷಯಗಳು, ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಎಲ್ಲರ ಮೇಲಿರಲಿ. 🙏💐 ಶುಭರಾತ್ರಿ 🙏😊💐
re1
like37
WhatsApp
ask