koo-logo
Backback
ಆರ್. ಅಶೋಕ
backblock

ಆರ್. ಅಶೋಕ badge_img

@rashoka_bjp

Politician

ಹೆಮ್ಮೆಯ ಕನ್ನಡಿಗ. ಕಂದಾಯ ಸಚಿವ, ಕರ್ನಾಟಕ ಸರ್ಕಾರ.

calenderrashoka.in

calender Joined on Aug 2020

KooKooKoo(57)
LikedLikedLiked(1)
Re-Koo & CommentRe-Koo & CommentRe-Koo & Comment
@rashoka_bjp

Politician

ತಾಯಿ ಬಾರೆ ಮೊಗವ ತೋರೆ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ. ಇಂತಹ ಸಾಲುಗಳು ಇಂದಲೇ ಕನ್ನಡಿಗರನ್ನು ಒಗ್ಗೂಡಿಸಿದ ಹಾಗೂ ಕರ್ನಾಟಕ ಏಕೀಕರಣಕ್ಕೂ ಮೊದಲೇ ಕನ್ನಡ ಭಾಷೆಯನ್ನು ದೇಶದ ಉದ್ದಗಲಕ್ಕೂ ಪಸರಿಸಿದ ಅಪರೂಪದ ರಾಷ್ಟ್ರಕವಿ ಶ್ರೀ ಎಂ. ಗೋವಿಂದ ಪೈ ಅವರ ಜನ್ಮದಿನದಂದು ನನ್ನ ವಿನಮ್ರ ನಮನಗಳು. ಕನ್ನಡ ಸಾಹಿತ್ಯ ಲೋಕಕ್ಕೆ ನೀವು ನೀಡಿರುವ ಕೊಡುಗೆಗಳು ನಿಮ್ಮ ಕೃತಿಗಳ ಮೂಲಕ ಎಲ್ಲರ ಮನದಲ್ಲೂ ಅಚ್ಚಳಿಯದಂತೆ ಹಸಿರಾಗಿದೆ.
commentcomment
@rashoka_bjp

Politician

ಲಸಿಕೆಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಮಾರ್ಚ್ 16 ರಂದು ದೇಶದಾದ್ಯಂತ ”ರಾಷ್ಟ್ರೀಯ ಲಸಿಕೆ ದಿನ” ಎಂದು ಆಚರಿಸಲಾಗುತ್ತದೆ. ಕೋವಿಡ್-19 ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೋವಿಡ್ ಮುಕ್ತ ದೇಶ ಹಾಗೂ ಕೋವಿಡ್ ಮುಕ್ತ ರಾಜ್ಯಕ್ಕೆ ಪಣತೋಡೋಣ. ಕೋವಿಡ್ ಲಸಿಕೆಗೆ ಅರ್ಹರಾದ ಎಲ್ಲರೂ ಲಸಿಕೆ ಪಡೆಯಬೇಕೆಂದು ವಿನಂತಿಸಿಕೊಳ್ಳುತ್ತೇನೆ
commentcomment
@rashoka_bjp

Politician

ಗ್ರಾಮ ಪಂಚಾಯತ್ ಚುನಾವಣೆ ಮೊದಲನೇ ಹಂತದ ಮತದಾನ ಇಂದು ನಡೆಯಲಿದ್ದು, ಗ್ರಾಮ ಪಂಚಾಯತ್ ವ್ಯವಸ್ಥೆಯು ಪ್ರಜಾಪ್ರಭುತ್ವದ ಬುನಾದಿಯಾಗಿದೆ. ಸಂವಿಧಾನದತ್ತವಾಗಿ ಲಭಿಸಿರುವ ಮತದಾನದ ಹಕ್ಕನ್ನು ಚಲಾಯಿಸೋಣ, ಸೂಕ್ತವಾದ ಅಭ್ಯರ್ಥಿಯನ್ನು ಆಯ್ಕೆ ಮಾಡೋಣ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಬೆಳವಣಿಗೆಯತ್ತ ಸಾಗಲು ನಮ್ಮೊಂದಿಗೆ ಕೈಜೋಡಿಸಿ. #Panchayat2Parliament
commentcomment
1
@rashoka_bjp

Politician

ಆತ್ಮೀಯ ರೈತ ಸೋದರ-ಸೋದರಿಯರೇ ನೂತನ ಕೃಷಿ ಮಸೂದೆ ಬಗ್ಗೆ ರೈತರಿಗೆ ಇರುವ ಸಕಾರಾತ್ಮಕ ಅಂಶಗಳು ಮತ್ತು ಪ್ರತಿ ಪಕ್ಷವು ರೈತರಿಗೆ ತಪ್ಪಾದ ಮಾಹಿತಿಯನ್ನು ನೀಡುವ ಮೂಲಕ ಸಂಪೂರ್ಣ ಕಾಲ್ಪನಿಕ ಸುಳ್ಳನ್ನು ಹರಡುತ್ತಿದ್ದಾರೆ. ಈ ಸುಳ್ಳನ್ನು ಹೋಗಲಾಡಿಸಲು ಕೃಷಿ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಬರೆದಿರುವ ಪತ್ರವನ್ನು ಎಲ್ಲೆಡೆ ಹಂಚೋಣ, ಸತ್ಯತೆಯನ್ನು ಎಲ್ಲರಿಗೂ ತಿಳಿಸೋಣ #ModiWithFarmers
commentcomment
@rashoka_bjp

Politician

ಬೆಂಗಳೂರಿನ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಹಾಗೂ ನಗರದ ಸರ್ವಾಂಗೀಣ ಪ್ರಗತಿಯ ನಿಟ್ಟಿನ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಕಾರ್ಯಗಳ ಮಾರ್ಗಸೂಚಿಯನ್ನು ಇಂದು ಬ್ಯಾಂಕ್ವೆಟ್ ಹಾಲ್ ನಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ.ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಡುಗಡೆಯಾದ ”ಮಿಷನ್-2022” ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದ ಸಂದರ್ಭ
commentcomment
@rashoka_bjp

Politician

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘಟನೆ ಹಮ್ಮಿಕೊಂಡಿರುವ ”ನಮ್ಮ ನಡೆ ಶಿಕ್ಷಕರ ಕಡೆ. ಶಿಕ್ಷಣ ಸಂಸ್ಥೆಗಳು-ಶಿಕ್ಷಕರು ಉಳಿದರೆ, ಶಿಕ್ಷಣ”ಎಂಬ ಸಾಂಕೇತಿಕ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ,ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸಲು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತ್ತೇವೆ ಎಂದು ಬರವಸೆ ನೀಡಿದೆವು.
commentcomment
2
@rashoka_bjp

Politician

”ಯೋಗ ಸಂಗೀತದಂತೆ. ದೇಹದ ಲಯ, ಮನಸ್ಸಿನ ಮಧುರ ಮತ್ತು ಆತ್ಮದ ಸಾಮರಸ್ಯವು ಜೀವನದ ಸ್ವರಮೇಳವನ್ನು ಸೃಷ್ಟಿಸುತ್ತದೆ. ” -ಬಿ.ಕೆ.ಎಸ್. ಅಯ್ಯಂಗಾರ್ ವಿಶ್ವದ ಅಗ್ರಗಣ್ಯ ಯೋಗ ಶಿಕ್ಷಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ, ಆಧುನಿಕ ಯೋಗ ಪಿತಾಮಹ, ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡ ಶ್ರೀ ಬಿ. ಕೆ. ಎಸ್. ಅಯ್ಯಂಗಾರ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು. ನಿಮ್ಮ ನೆನಪು ಯೋಗದ ಮೂಲಕ ಅಜರಾಮರ
commentcomment
1
@rashoka_bjp

Politician

ಆತ್ಮೀಯ ರೈತಬಾಂಧವರೇ, ಕೃಷಿ ಮಸೂದೆಗೆ ಸಂಬಂಧಿಸಿದಂತೆ ಬರುತ್ತಿರುವ ಊಹಾಪೋಹಾಗಳಿಗೆ ಕಿವಿಕೊಡದೆ ಸತ್ಯವನ್ನು ಅರಿತು, ಸರ್ಕಾರದೊಂದಿಗೆ ಕೈಜೋಡಿಸೋಣ. 21ನೇ ಶತಮಾನದ ಭಾರತೀಯ ರೈತರು ಕೃಷಿ ಮಾಡಲು ಮತ್ತು ತಮ್ಮ ಉತ್ಪನ್ನ ಮಾರಾಟವನ್ನು ಯಾವುದೇ ನಿರ್ಬಂಧಗಳಿಲ್ಲದೆ ಮುಕ್ತವಾಗಿ ನಡೆಸಲಿದ್ದಾರೆ. ಸುಳ್ಳುಗಳ ಬಗ್ಗೆ ಎಚ್ಚರವಹಿಸಿ, ಸತ್ಯವನ್ನು ಅರಿಯಿರಿ
commentcomment
@rashoka_bjp

Politician

ಬಿಜೆಪಿ ಕೊಟ್ಟ ಮಾತಿನಂತೆ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದೆ. ಈ ಮೂಲಕ ನಮ್ಮ ಪಕ್ಷವು ರಾಜ್ಯ ಜನತೆಯ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದೆ @BJP4Karnataka
commentcomment
3
@rashoka_bjp

Politician

ಜಾಗತಿಕ ಹಕ್ಕು ಹಾಗೂ ಸಮಾನ ಸಮಾಜ ಕಟ್ಟುವಲ್ಲಿ ಮಾನವ ಹಕ್ಕುಗಳು ಪ್ರಮುಖ ಪಾತ್ರ ವಹಿಸುತ್ತದೆ. ಮಾನವ ಕುಟುಂಬದ ಎಲ್ಲ ಸದಸ್ಯರ ಅಂತರ್ಗತ ಘನತೆ ಮತ್ತು ಸಮಾನ ಹಕ್ಕುಗಳ ಬಗ್ಗೆ ಸಾರ್ವತ್ರಿಕ ಗೌರವ ಇದ್ದಾಗ ಮಾತ್ರ ಹೆಚ್ಚು ನ್ಯಾಯಯುತ, ಸುರಕ್ಷಿತ ಮತ್ತು ಶಾಂತಿಯುತ ಜಗತ್ತಿಗೆ ನಮ್ಮ ಆಶಯಗಳನ್ನು ಸಾಧಿಸಬಹುದು . ಮಾನವ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಸರ್ವರಿಗೂ ಮಾನವ ಹಕ್ಕುಗಳ ದಿನದ ಶುಭಾಶಯಗಳು
commentcomment
create koo