koo-logo
koo-logo
back
ಪವಿತ್ರ ಸಂತೋಷ್😍
shareshareblockblock

ಪವಿತ್ರ ಸಂತೋಷ್😍

@pavithra_santhosh

ಶಿಕ್ಷಕಿ, ತೋಚಿದ್ದು ಗೀಚೋದು ಆಶು ಬರಹ ತುಂಬಾ ಇಷ್ಟ

ಕನ್ನಡದಲ್ಲಿ ಕೂ ಮಾಡಿ

calender Joined on Apr 2020
KooKoo 387
LikedLiked 8K
CommentComment 4K
Re-KooRe-Koo 6
@pavithra_santhosh

ಶಿಕ್ಷಕಿ, ತೋಚಿದ್ದು ಗೀಚೋದು ಆಶು ಬರಹ ತುಂಬಾ ಇಷ್ಟ

#ಕುಂಟೆಬಿಲ್ಲೆ ಒಂಟಿಕಾಲನೆತ್ತಿ ಕುಂಟಿ ಆಡಿ ನಲಿದ ಆಟವದು ಜಂಟಿಯಾಗಿ ಒಂಟಿಯಾಗಿ ಕೂಡಿಕಳೆದ ಕಾಲವದು ಆನು ತಾನು ನೀನು ಮೊದಲು ಸಹಬಾಳ್ವೆಯ ಆಟವೂ ಆಡುವವನ ನಿಂತು ನೊಡೋ ಮುಗ್ದತೆಯ ನೋಟವೂ ಕುಂಟೆಬಿಲ್ಲೆ ಎಸೆದು ನೆಗೆದು ಹಾರಿ ಮನೆಯ ತಲುಪುತ ನೆಗೆದು ಕುಣಿದು ಮನೆಯ ಸೇರೊ ಬಾಲ್ಯವದು ಅಧ್ಬುತ ಜೀವನವೂ ಕುಂಟೆಬಿಲ್ಲೆ ಕುಂಟುತಲೇ ಸಾಗಿದೆ ಬಿಲ್ಲೆ ದೂರ ಬಿದ್ದರಲ್ಲೆ ಹಿಡಿಯಲದನು ಓಡುತಿದೆ ಹಾರಿ ದಣಿದು ದುಡಿದು ಮಣಿದು ದೊರೆಯಲೊಂದು ಬಿಲ್ಲೆಯೂ ಮನಕೆ ಹರುಷ ಖುಷಿಯ ನಿಮಿಷ ಸ್ವರ್ಗವೆಂದೂ ಇಲ್ಲೆಯೂ ಬಾಲ್ಯ ನೆನಸಿ ಕುಂಟೆಬಿಲ್ಲೆ ನೆನಸಿತೀಗ ತರತರ ಒಂಟಿಗಾಲ ಪಯಣವಿದು ಎನಿತು ನಿತ್ಯ ನಿರಂತರ
commentcomment
4
@pavithra_santhosh

ಶಿಕ್ಷಕಿ, ತೋಚಿದ್ದು ಗೀಚೋದು ಆಶು ಬರಹ ತುಂಬಾ ಇಷ್ಟ

ಕಾಲಕ್ಕೂ ಕೊಡು ಸ್ವಲ್ಪ ಕಾಲಾವಕಾಶ ನಿಂತು ನೋಡಲಿ ನಿನ್ನ ಮನದಭಿಲಾಶ ಏಕಿಂತು ಕಾತರ ಏನಿತು ಅವಸರ ಓಡುವ ಪರಿಯೇಕೆ ಕಾಲಕ್ಕೂ ಮುನ್ನ ನಿಂತು ನೋಡೊಮ್ಮೆ ತಿರುಗಿ ನೋಡುವುದು ಕಾದು ನೋಡೊಮ್ಮೆ ಕಾಲವೇ ಬರುವುದು ಸಮಯಕ್ಕೂ ಬೇಕಲ್ಲ ಸ್ವಲ್ಪ ವಿಶ್ರಾಮ ಅವಸರದ ಜೀವನದಿ ಎಲ್ಲಿದೆ ವಿರಾಮ ಕಾದಾಗ ಚಿಂತಿಸು ಕೂತಾಗ ಯೋಚಿಸು ಕಾಲವೇ ಬಂದಾಗ ಕೆಲಸ ಆರಂಭಿಸು ಬದುಕಿದು ಕಾಲದ ಕಾಲಡಿ ನಡೆಯಲಿ ನಿಂತು ನೋಡೊಮ್ಮೆ ಕಾಲವೇ ಕಾಯಲಿ ಶುಭರಾತ್ರಿ 😍
commentcomment
4
@pavithra_santhosh

ಶಿಕ್ಷಕಿ, ತೋಚಿದ್ದು ಗೀಚೋದು ಆಶು ಬರಹ ತುಂಬಾ ಇಷ್ಟ

ಮರಳಿ ನಿಮ್ಮ ಬಳಿಗೆ..... ಸ್ನೇಹದ ಕೂ ಕಡಲಿಗೆ..... ಇರಲಿ ಎಂದಿನ ಪ್ರೀತಿ..... ಮೆಚ್ಚಿರಿ ಬರೆಯುವ ರೀತಿ..... ತರುವೆ ಹೊಸ ಚುಟುಕು ಚಿತ್ರ.... ನಿಮ್ಮ ಪ್ರೀತಿಯ ಪವಿತ್ರ.....😊🙏
commentcomment
8
@pavithra_santhosh

ಶಿಕ್ಷಕಿ, ತೋಚಿದ್ದು ಗೀಚೋದು ಆಶು ಬರಹ ತುಂಬಾ ಇಷ್ಟ

ಮಾತನಾಡುವ ಮನುಷ್ಯ ಮಾತ್ರವೇ ಕಂಡವರ ಕಣ್ಣಿಗೆ ಗುರಿಯಾಗುತ್ತಾನೆ ಬೊಗಳುವ ಶ್ವಾನ ಮಾತ್ರವೇ ಶಬ್ದ ಮಾಡಿ ನೋಡುಗರ ಗಮನ ಸೆಳೆಯತ್ತದೆ ಬಾಯಿ ತೆರೆದ ಮೀನು ಮಾತ್ರವೇ ಬಲೆಗೆ ಬೀಳುತ್ತದೆ ಇದೆಲ್ಲ ತಿಳಿದವರಾದ ನಾವೇ ಹೆಚ್ಚು ಮಾತನಾಡುತ್ತೇವೆ.......... ಶುಭೋದಯ 😊😊 ಶುಭದಿನ 🙏🙏
commentcomment
29
@pavithra_santhosh

ಶಿಕ್ಷಕಿ, ತೋಚಿದ್ದು ಗೀಚೋದು ಆಶು ಬರಹ ತುಂಬಾ ಇಷ್ಟ

ಎಲ್ಲವೂ ಸರಿಯಿದ್ದಿದ್ದರೆ ಇಂದು ಶಾಲಾ ಪ್ರಾರಂಭೋತ್ಸವ ಮಗುವು ಸಂಭ್ರಮದಿ ಗೆಳೆಯರಿಗಾಗಿ ಕಾಯುತ್ತಿದ್ದ ದಿನ ಹೊಸ ಪುಸ್ತಕ ಬಟ್ಟೆ ಹೊಸ ತರಗತಿಯೊಳಗೆ ತನ್ನ ಬೆಂಚನ್ನು ಕಾದಿರಿಸುವ ಸುದಿನ ಮೊದಲು ಬಂದು ಇಂದಿನ ಕೆಲಸದಲ್ಲಿ ಭಾಗವಹಿಸಿ ಟೀಚರ್ ಮೆಚ್ಚುಗೆ ಗಳಿಸಿ ಅವರ ಮನದಲ್ಲಿ ಬಾಯಲ್ಲಿ ಹೆಸರನ್ನು ಅಚ್ಚುಹಾಕುವ ದಿನ ಆದರೆ ಇಂದು😔 ದೇವರಿಲ್ಲದ ಗುಡಿ ಪಾಳುಬಿದ್ದಿದೆ ಅನಾಗರಿಕ ಚಟುವಟಿಕೆಗಳ ಬೀಡಾಗಿದೆ ಮಕ್ಕಳು ಮನಸು ಮಂಕಾಗಿದೆ ಕನಸು ಸ್ತಬ್ದವಾಗಿವೆ ಆದಷ್ಟು ಬೇಗ ಇದೆಲ್ಲ ಮುಗಿಯಬೇಕಿದೆ 🙏🙂
commentcomment
10
@pavithra_santhosh

ಶಿಕ್ಷಕಿ, ತೋಚಿದ್ದು ಗೀಚೋದು ಆಶು ಬರಹ ತುಂಬಾ ಇಷ್ಟ

ಲಾಕ್ಡೌನ್ ಸಂಧರ್ಭದಲ್ಲೂ ಮದುವೆ ಬೇಕೇ ನಮಗೆ ಈ ಗೊಡವೆ ಆರೋಗ್ಯವೇ ನಮ್ಮ ಒಡವೆ ನೆಲದ ಕಾನೂನು ಪಾಲಿಸೋಣ ಅದುವೆ ನಾಡಿಗೆ ನಮ್ಮ ಸೇವೆ..... ಶುಭೋದಯ ಶುಭದಿನ ☺😊
commentcomment
13
@pavithra_santhosh

ಶಿಕ್ಷಕಿ, ತೋಚಿದ್ದು ಗೀಚೋದು ಆಶು ಬರಹ ತುಂಬಾ ಇಷ್ಟ

ಬಿದ್ದಾಗ ಸಹಿಸುವ ಸಾಮರ್ಥ್ಯ ಇದ್ದವನು ಮಾತ್ರ ಜೀವನದಲ್ಲಿ ಎದ್ದು ನಿಲ್ಲಲು ಶಕ್ತನಾಗುತ್ತಾನೆ ಕಷ್ಟಗಳೆ ಆಗಲಿ ದೇವರೇ ಆಗಲಿ ಅದರ ಮುಂದೆ ಬಾಗುವುದನ್ನು ಕಲಿತವನು ಮಾತ್ರ ಬೀಗುತ್ತಾನೆ ಶುಭದಿನ 💐💐💐💐
commentcomment
19
@pavithra_santhosh

ಶಿಕ್ಷಕಿ, ತೋಚಿದ್ದು ಗೀಚೋದು ಆಶು ಬರಹ ತುಂಬಾ ಇಷ್ಟ

ಹೊಸವರುಷ ಹೊಸಹರುಷ ಯುಗಾದಿಯ ಶುಭಾಶಯಗಳು 😊😊 ಶುಭೋದಯ ಶುಭದಿನ
commentcomment
13
@pavithra_santhosh

ಶಿಕ್ಷಕಿ, ತೋಚಿದ್ದು ಗೀಚೋದು ಆಶು ಬರಹ ತುಂಬಾ ಇಷ್ಟ

ಕಲ್ಪನಾ ಪ್ರೇಮ #೪ ನಿನ್ನ ಏಳ್ಗೆಗಾಗಿ ಶ್ರಮಿಸುವೆ ಆನಾರೋಗ್ಯದಿ ತಾಯಾಗುವೆ ಕಷ್ಟ ಬೇಸರಗಳಲಿ ಜೊತೆಯಾಗಿ ನಿಲ್ಲುವೆ ಮುನ್ನುಗ್ಗು ಮುಳ್ಳಿನಲಿ ನಿನ್ನ ಚಪ್ಪಲಿಯಾಗಿರುವೆ...... ನಿನ್ನ ಕಲ್ಪನೆಗಿಂತ..... ನಾ ಸುಂದರವಾಗಿಲ್ಲದಿರಬಹುದು ಆದರೆ ಸುಂದರವಾದ ಬದುಕ ನಿನಗಾಗಿ ಕೊಡಬಲ್ಲೆ ಹಿಂದಿರುಗಿ ನೋಡೊಮ್ಮೆ ನಾನಿರುವೆ ಬೆನ್ನಲ್ಲೇ..... ಹೊರತಾಗಿ ನಿನ್ನ ಜೀವನವು ಖಾಲಿ ಮುರಿದು ಬಿಡು ಇಂದೇ ನಡುವಿರುವ ಬೇಲಿ ನಮಗಾಗಿ ನಾವೇ ಯಾರಿಲ್ಲ ಕೊನೆಗೆ ಇರುವೆಯಾ ನನ್ನ ಕಡೆವರೆಗೂ ಜೊತೆಗೆ.... 🙏🙏
commentcomment
7
@pavithra_santhosh

ಶಿಕ್ಷಕಿ, ತೋಚಿದ್ದು ಗೀಚೋದು ಆಶು ಬರಹ ತುಂಬಾ ಇಷ್ಟ

ಕಲ್ಪನಾ ಪ್ರೇಮ #೩ ಕಣ್ಣಿರಿಗೆ ಬೆಲೆಯಿಲ್ಲ ನೋವಾದರೂ ನಗಬೇಕು ಅನುಮಾನ ಪಡುತಿರುವೆ ಮನೆಯಲ್ಲೇ ಇರಬೇಕು ನಿನ್ನ ಬಿಟ್ಟು ಬದುಕುವ ಶಕ್ತಿಯಿದ್ದಿದ್ದರೆ ಏಂದೊ ಹೋಗಿರುವೆ ಬೇಕಿಲ್ಲ ಆಸರೆ ಬದುಕಿರುವ ಕೊನೆವರೆಗೂ ಗೌರವಿಸುವೆ ನಿನಗಿರುವ ಹೆಸರು ಮರ್ಯಾದೆಯನ್ನು ಅದಕಾಗಿ ಮುಚ್ಚಿಟ್ಟಿರುವೆ ನಿನ್ನೆಲ್ಲ ತಪ್ಪುಗಳನ್ನು....‌‌.... ಸಾಧ್ಯವಾದರೆ ಹನಿಯಷ್ಟು ಪ್ರೀತಿಕೊಡು ಸಾಗರದಷ್ಟು ಹಿಂತಿರುಗಿಸುವೆ ಕೊಟ್ಟರು ಕೊಡದಿದ್ದರೂ ನಾ ನಿನ್ನೇ ಪ್ರೀತಿಸುವೆ...... ಮುಂದುವರೆದಿದೆ. ....
commentcomment
4
create koo