backMallikarjuna Chickmathback

Mallikarjuna Chickmath

@mallikarjuna_14_038

ಸಾಹಿತ್ಯಭಿರುಚಿ,ಹವ್ಯಾಸಿ ಕವನ,ಕಥೆ,ಕಿರು ನಾಟಕ ಬರಹಗಾರರು.

ಕನ್ನಡದಲ್ಲಿ ಕೂ ಮಾಡಿ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ! 👌 ಕನ್ನಡವೆನೆ ಕುಣಿದಾಡುವದೆನ್ನೆದೆ ಕನ್ನಡವೆನೆ ಕಿವಿ ನಿಮಿರುವುದು! 🙋‍♂️🌷ಕುವೆಂಪು.

calender May 2020 ನಲ್ಲಿ ಸೇರಿಕೊಂಡರು

ಕೂಸ್ (607)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
ಸಾಹಿತ್ಯಭಿರುಚಿ,ಹವ್ಯಾಸಿ ಕವನ,ಕಥೆ,ಕಿರು ನಾಟಕ ಬರಹಗಾರರು.
ಇಂದು ಕನ್ನಡ ರಾಜ್ಯೋತ್ಸವ! ಕನ್ನಡಿಗರಿಗೆಲ್ಲ ಹರುಷೋತ್ಸವ! ೧೯೫೬ ನವೆಂಬರ್ ೧ ರಂದು ಭಾಷಾವಾರ ಪ್ರಾಂತ್ಯ ರಚನೆ ಕಾಯದೆ ಅಡಿಯಲ್ಲಿ ಕನ್ನಡ ಮಾತಾಡುವ ವಿವಿಧ ಪ್ರದೇಶಗಳ ಏಕೀಕರಣವಾಯಿತು. ಶ್ರೀ ಆಲೂರ ವೆಂಕಟ ರಾವ್ ಕರ್ನಾಟಕ ಏಕೀಕರಣದ ಹರಿಕಾರ.ಅಂತೆಯೇ ಅವರನ್ನು "ಕರ್ನಾಟಕ ಕುಲಪುರೋಹಿತ" ಎನ್ನುತ್ತಾರೆ. ಆಗ ನಮ್ಮ ರಾಜ್ಯದ ಹೆಸರು "ಮೈಸೂರು ರಾಜ್ಯ" ಎಂದಿತ್ತು. ೧೯೭೩ ನವೆಂಬರ್ ೧ ರಂದು "ಕರ್ನಾಟಕ" ಎಂದು ಮರು ನಾಮಕರಣವಾಯಿತು! ಏಕೀಕರಣದ ಪೂರ್ಣ ವಿವರಗಳಿಗೆ ಈ ವಿಡಿಯೋ ಕೇಳಿ. ಜೈ ಕರ್ನಾಟಕ !
play
re
like1
WhatsApp
img
ಸಾಹಿತ್ಯಭಿರುಚಿ,ಹವ್ಯಾಸಿ ಕವನ,ಕಥೆ,ಕಿರು ನಾಟಕ ಬರಹಗಾರರು.
@guest_31M1U ನೀವು ಹೆಸರು ಹಾಕದಿದ್ದರೆ ಬೇರೆಯವರಿಗೆ ಹೇಗೆ ಗೊತ್ತಾಗಬೇಕು !
re
like13
WhatsApp
img
ಸಾಹಿತ್ಯಭಿರುಚಿ,ಹವ್ಯಾಸಿ ಕವನ,ಕಥೆ,ಕಿರು ನಾಟಕ ಬರಹಗಾರರು.
🍀 🌹ಕಾಫಿ ಕುಡೀತಾ 🌹🍀 ಗಂಡ-ನೀನು ರಾಜ ದಶರಥನ ಬಗ್ಗೆ ಕೇಳಿದ್ದಿಯಾ? ಹೆಂಡತಿ-ಹೌದು,ಈಗ ಯಾಕೆ? ಗಂಡ - ಅವನಿಗೆ 3 ಹಂಡತಿಯರಿದ್ದರು. ಹೆಂಡತಿ - ಹೌದು,ಸಣ್ಣ ಮಕ್ಕಳಿಗೂ ಗೊತ್ತು. ಗಂಡ - ಅಲ್ಲ, ಆ ಲೆಕ್ಕದಲ್ಲಿ ನಾನು ಇನ್ನೆರಡು ಮದುವೆ ಆಗ ಬಹುದು,ಏನಂತಿಯಾ? ಹೆಂಡತಿ : ನೀವು ದ್ರೌಪದಿಯ ಹೆಸರು ಕೇ‌ಳಿದ್ದಿರಾ?😜 ಗಂಡ- ಏ ,ಹೋಗಲಿ ಬಿಡೇ. ನೀನು ಚಿಕ್ಕ ಚಿಕ್ಕ ವಿಷಯ ಕೂಡ ಮನಸ್ಸಿಗೆ ತಗೋ ಬೇಡ ಚಿನ್ನಾ .. 😆😅😂 (ಹೆಂಡತಿ ಒಳಗೇ ನಗುವಳು) ಶುಭಸಂಜೆ 🙏 :-ಎಂಬೀಚಿ 🌹🌹 🍀🍀
re
like36
WhatsApp
img
ಸಾಹಿತ್ಯಭಿರುಚಿ,ಹವ್ಯಾಸಿ ಕವನ,ಕಥೆ,ಕಿರು ನಾಟಕ ಬರಹಗಾರರು.
🍀 🌺 🍀 ಆ ಒಂದು ಸಂಜೆ ವಿಹಾರಕೆ ಹೊರಟಿದ್ದೆ ಊರ ಕೆರೆ ದಂಡೆ! ಕೆಂಬಣ್ಣ ತುಂಬಿದ ಆ ಸಂಜೆ ಆಗಸ ! ದಿನವಿಡೀ ಹಾರಾಡಿ ಗೂಡಿಗೆ ಮರಳುತ್ತಿದ್ದ ಹಕ್ಕಿ! ಸದ್ದು ಮಾಡದೇ ಅರಳುತ್ತಿದ್ದ ವಿಧ ವಿಧದ ಹೂ ಗಿಡಗಳು! ಸಂಜೆಯ ತಂಗಾಳಿ ಬೀಸುತಲಿತ್ತು ಹೂಗಳ ಸುಗಂಧವನು ಹೊತ್ತು! ಇಂಥಪ್ಪ ಸಮಯದಲ್ಲಿ ನಾ ಅಲ್ಲಿ ಹೊರಟಿರೆ.. ಕಂಡೆ ನನ್ನ ಮುಂದೆ ಹೋಗುವ ಮಲ್ಲಿಗೆ ದಂಡೆ ಮರುಳಾಗಿ ಹೋದೆ ಹಿಂದೆ ಹಿಂದೆ! ತಿರುಗಿತು ಆಸಾಮಿ "ಚಪ್ಪಾಳೆ " ಹೊಡೆದು! ಓಡಿದೆ ಅಲ್ಲಿಂದ ಗೊತ್ತಾಗದಂತೆ!😆😅 :-ಎಂಬೀಚಿ 🌹🌹
re
like26
WhatsApp
img
ಸಾಹಿತ್ಯಭಿರುಚಿ,ಹವ್ಯಾಸಿ ಕವನ,ಕಥೆ,ಕಿರು ನಾಟಕ ಬರಹಗಾರರು.
🍀🌾🍀🌾🍀 ಇಂದು ಮಹರ್ಷಿ ವಾಲ್ಮೀಕಿ ಜಯಂತಿ ! ಮಹರ್ಷಿ ವಾಲ್ಮೀಕಿ ಯವರ ಜೀವನ, ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದೆಂಬುದಕ್ಕೆ ಐತಿಹಾಸಿಕ ಸಾಕ್ಷಿಯಾಗಿದೆ! ಅವರು ರಚಿಸಿದ "ರಾಮಾಯಣ" ಮಹಾ ಕಾವ್ಯ ಇದಕ್ಕೆ ಕೈಗನ್ನಡಿಯಾಗಿದೆ. ರಾಮಾಯಣ 24000 ಶ್ಲೋಕಗಳನ್ನೂ 7 ಕಾಂಡ ಗಳನ್ನೂ ಹೊಂದಿದೆ! ಮಹರ್ಷಿ ವಾಲ್ಮೀಕಿ ಸಂಸ್ಕೃತ ಭಾಷೆಯ ಮೊದಲ ಕವಿ.ಆದ್ದರಿಂದ ಅವರಿಗೆ "ಆದಿ ಕವಿ" ಎಂದು ಕರೆಯುತ್ತಾರೆ. ಎಲ್ಲರಿಗೂ ವಾಲ್ಮೀಕಿ ಜಯಂತಿ ಶುಭಾಶಯಗಳು 💐💐 :-ಎಂಬೀಚಿ 🌹🌹
re1
like37
WhatsApp
img
ಸಾಹಿತ್ಯಭಿರುಚಿ,ಹವ್ಯಾಸಿ ಕವನ,ಕಥೆ,ಕಿರು ನಾಟಕ ಬರಹಗಾರರು.
🌺 ಹಿತವಚನ 🌺 ನಾವು ಏನೇ ಸಾಧನೆ ಮಾಡಬೇಕಾದರೆ ನಮ್ಮ ಮನಸ್ಸಿನ ಮೇಲೆ ಹಿಡಿತ ಮುಖ್ಯ! ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ... ಹೇ ಅರ್ಜುನ,ವ್ಯಕ್ತಿ ಎಷ್ಟೇ ಚತುರ ಮತ್ತು ಕ್ರಿಯಾಶೀಲನಾದರೂ ಇಂದ್ರಿಯಗಳು ಯಾರ ಮನಸ್ಸು ಚಂಚಲವಾಗಿರುತ್ತದೆಯೋ ಅಂಥವನ ಪ್ರಜ್ಞೆಯನ್ನು ಗಾಳಿಗೆ ಸಿಕ್ಕ ದೋಣಿಯಂತೆ ಬೇಕಾದಲ್ಲಿಗೆ ಸೆಳೆದುಕೊಂಡು ಹೋಗುತ್ತವೆ! ಆದ್ದರಿಂದ ನಿನ್ನ ಮನಸ್ಸನ್ನು ನೀನು ಮೊದಲು ಗೆಲ್ಲಬೇಕು.ಅದುವೇ ಧೀರೋದಾತ್ಯ ಕಾರ್ಯವೆಂದು ಹೇಳುತ್ತಾನೆ! ಶುಭೋದಯ 🙏 :-ಎಂಬೀಚಿ 🌹🌹
re
like54
WhatsApp
img
ಸಾಹಿತ್ಯಭಿರುಚಿ,ಹವ್ಯಾಸಿ ಕವನ,ಕಥೆ,ಕಿರು ನಾಟಕ ಬರಹಗಾರರು.
🍀 🌺 🍀 🌺 🍀 🌺 🍀 🌺 🍀 🌷 ನಿದ್ರೆಯಲ್ಲಿ ಕಂಡ ಕನಸು 🌺 ಕಣ್ಣು ತೆರೆದರೆ ನನಸು ! 🌻 ಆಗಲು ಜೀವನವೆಷ್ಟು 💐 ಸೊಗಸು !! 💐ಇಂಥ ಸುಂದರ ಕನಸು ನಿಮ್ಮದಾಗಲಿ !! 🍄 koo ಎಲ್ಲ ಗೆಳೆಯರಿಗೂ ಶುಭರಾತ್ರಿ 🙏🙏 :-ಎಂಬೀಚಿ 🌹🌹 🌿🍁🌻🌿🍁🌻🌿🍁🌻🌿🍁🌻🌿
play
re
like27
WhatsApp
img
ಸಾಹಿತ್ಯಭಿರುಚಿ,ಹವ್ಯಾಸಿ ಕವನ,ಕಥೆ,ಕಿರು ನಾಟಕ ಬರಹಗಾರರು.
(ಟ್ರಿಂಗ್ ಟ್ರಿಂಗ್) ☎📞 ಸೊಸೆ: ಹಲೋ.. ಅತ್ತೆ:ನಾನಮ್ಮ,ನಿನ್ನ ಅತ್ತೆ.. ಚನಾಗಿದಿಯಾ? ಸೊಸೆ: ನಾನ್ ಸೂಪರ್..ನೀವು? ಅತ್ತೆ: ನಾನೂ ಚನಾಗಿದೀನಮ್ಮ .. ನನ್ ಮಗ ಹೆಂಗಿದಾನೆ? ಸೊಸೆ: ಅವ್ರಾ ಆಸ್ಪತ್ರೆಯಲ್ಲಿದಾರೆ. ಅತ್ತೆ: ಏ ಏನಾಯ್ತೆ ಅವನಿಗೆ? ಸೊಸೆ:ಅದಾ,ನಿನ್ನೆ ಆಫೀಸ್ ಇಂದ ಬರ್ತಿದ್ಹಾಗೆ,'ಲೇ ಏನಾದರೂ ಇದ್ರೆ ಕೊಡೆ, ಹೊಟ್ಟೇಲಿ ಇಲಿಗಳು ಓಡಾಡ್ತಿವೆ' ಅಂದ್ರು.. ಅ:ನೀ ಏನ ಮಾಮಾಡಿದೆ ಸೊ:ಕಾಫಿಯಲ್ಲಿ ಇಲಿ ಪಾಷಾಣ ಬೆರೆಸಿ ಕೊಟ್ಟೆ .icu ನಲ್ಲಿದ್ದಾರೆ. ಸರಿ ಹೋಗ್ತಾರೆ ಬಿಡಿ.😆😅
re1
like73
WhatsApp
img
ಸಾಹಿತ್ಯಭಿರುಚಿ,ಹವ್ಯಾಸಿ ಕವನ,ಕಥೆ,ಕಿರು ನಾಟಕ ಬರಹಗಾರರು.
🍀🌾🍀🌾🍀🌾🍀🌾🍀🌾🍀 ಈ ಹೆದರಿಕೆ ಅನ್ನೋದು ಯಾರನ್ನೂ ಬಿಟ್ಟಿಲ್ಲ . ಇವರನ್ನ ಕಂಡರ ಅವರಿಗೆ ಹೆದರಿಕೆ! ಅವರನ್ನ ಕಂಡರ ಇವರಿಗೆ ಹೆದರಿಕೆ ! ಮನುಷ್ಯರ ಕಂಡರ ಪ್ರಾಣಿಗಳಿಗೆ ಹೆದರಿಕೆ .... ಹಿಂಗ ಹೋಗತದ ಅಂಜಕಿ ಚಕ್ರ . ಈ ಕೆಳಗಿನ ಚಕ್ರ ನೋಡಿದರ ನಿಮಗ ತಿಳೀತದ ಯಾರು ಯಾರಿಗೆ ಹೆದರತಾರ ಅಂತ !!
re
like34
WhatsApp
img
ಸಾಹಿತ್ಯಭಿರುಚಿ,ಹವ್ಯಾಸಿ ಕವನ,ಕಥೆ,ಕಿರು ನಾಟಕ ಬರಹಗಾರರು.
🌿🍁🌻🌿🍁🌻🌿 ಹಳ್ಳಿ ಬೀದಿಯಲೂ ದಿಲ್ಲಿ ಬೀದಿಯಲೂ! ಒಂದೇ ಹಾಡಿದ ದಾಸಯ್ಯ ನಿನ್ನನು ನೀನು ತಿಳಿಯಯ್ಯಾ ! ಹೆಂಡಿರು ಮಕ್ಕಳು ಬಂಧು ಬಳಗ ಮೂರೇ ದಿನಗಳ ನಂಟು! ಇಂದು ತಪ್ಪಿದರೆ ನಾಳೆಗೆ ನೀನು ಕಟ್ಟಬೇಕು ನಿನ ಗಂಟು! ಹೆಜ್ಜೆ ಹೆಜ್ಜೆಗೂ ತಿಳಿಯದಂತೆ ಬಲೆ ಬೀಸಿ ಕುಣಿಸುವದು ಮಾಯೆ! ಜೀವನದ ಈ ಪಯಣದಲ್ಲಿ ಯಾರೆಲ್ಲಿ ಇಳಿವರೋ ಕಾಣೆ! ಎಷ್ಟು ಗಳಿಸಿದರೂ ಬಿಟ್ಟು ಹೋಗಬೇಕು ಮೋಸ ಮಾಡುವೆ ಏತಕ್ಕೆ ? ಬಿಡಿಗಾಸು ಕೂಡ ಜತೆಗೆ ಬಾರದು ನಾಳೆ ಹೋಗುವಾಗ ಮಸಣಕ್ಕೆ ! :-ಎಂಬೀಚಿ 🌹🌹 🍀🌷🍀🌷🍀🌷🍀
re1
like31
WhatsApp
ask