backಕುಸುಮಾ. ಭಟ್back

ಕುಸುಮಾ. ಭಟ್

@kusuma_bhat

ಸಾಹಿತ್ಯಾಭಿಮಾನಿ

ಹೃದಯದ ಹೂವಿನ ಹಂದರ.... ಭಾವನೆಗಳ ಆಗರ....💅 🍀🌳ಮಲೆನಾಡ ಮಡಿಲಿಂದ🌳🍀

calender July 2020 ನಲ್ಲಿ ಸೇರಿಕೊಂಡರು

ಕೂಸ್ (104)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
ಸಾಹಿತ್ಯಾಭಿಮಾನಿ
💅ಹೋಲಿಕೆ💕 ಎಲ್ಲ ಗಂಡಸರು ತಮ್ ತಮ್ಮ ಪ್ರಿಯತಮೆಯರ ಸೌಂದರ್ಯಕೆ ಮನಸೋತು 🙎👩💁 "ಕಣ್ಣು ಕಾಮನ ಬಿಲ್ಲು ತುಟಿಯು ತೊಂಡೆಹಣ್ಣು ಮೂಗು ಸಂಪಿಗೆ ಎಸಳು" ಎಂದೆಲ್ಲ ವರ್ಣಿಸಿದರೆ 😃‼️😘 ನನ್ನವರು ಹಾಗಲ್ಲ ಎಂದೂ ನನ್ನ ಬಿಟ್ಟು ಕೊಡದವರು😍 ಹಸಿರೆಲೆ ನಡುವೆ ಸುವಾಸನೆಯ ಸಂಪಿಗೆ ಕಂಡು "ಓಹ್ ಹೂವೆ ನೀನೆಷ್ಟು ಚೆಂದ ನನ್ನ ಮನದನ್ನೆಯ ನಾಸಿಕದಂತೆ ನಿನ್ನಂದ " ಎಂದು ಹೊಗಳುವರು 😃😁😂🤣
re
like41
WhatsApp
img
ಸಾಹಿತ್ಯಾಭಿಮಾನಿ
#ಭೂಮಿಹುಣ್ಣಮೆ ಅಥವಾ ಸೀಗೆ ಹುಣ್ಣಿಮೆ ಇಂದು ಮಲೆನಾಡಿನಾದ್ಯಂತ ರೈತಾಪಿ ವರ್ಗದವರು ಆಚರಿಸುತ್ತಿರುವ ಹಬ್ಬ. ಬದುಕಿನ ಉಸಿರಾಗಿರುವ ಹಸಿರ ಸಿರಿಗೆ ಸೀಮಂತ ಮಾಡಿ ಬಡಿಸುವ ಹಬ್ಬ !! ರೈತರು ತಮ್ಮ ತೋಟ ಗದ್ದೆಗಳಲ್ಲಿ ಬಾಳೆಕಂಬ ಹಾಗೂ ಮಾವಿನೆಲೆ ತೋರಣದಿಂದ ಸಿಂಗರಿಸಿ ಭೂಮಿ ಪೂಜೆ ಮಾಡಿ ನಂತರ ಹಸೆ ಬರೆದ ಬುಟ್ಟಿಯಲ್ಲಿ ತಂದ ಹತ್ತಾರು ಬಗೆ ಸೊಪ್ಪು ಮತ್ತು ಅನ್ನ ಸೇರಿಸಿದ "ಚೆರಗ" ಜಮೀನಿನ ತುಂಬಾ ಚೆಲ್ಲಿ ವಿಶೇಷ ಭಕ್ಷ ಕಡುಬನ್ನು ಭೂಮಿಯೊಳಗೆ ಹೂತಿಟ್ಟು ತೋಟದಲ್ಲೇ ಊಟ ಮಾಡುವರು.ಮಾಡು
re
like24
WhatsApp
img
ಸಾಹಿತ್ಯಾಭಿಮಾನಿ
💠ಓ,, ಮನಸೇ... ಅದೇಕೋ ಪದಗಳಿಗೂ ಮುಷ್ಕರ ಲೇಖನಿಗೂ ಮುನಿಸು ಬರೆದು ಬರೆದು ಸಾಕಾಯಿತ ಕೂಸೇ💠 ಎದೆಯಲ್ಲಿ ಅದೆಷ್ಟೋ ಆರದ ತೀರದ ಕನಸ ಈಡೇರದ ಆಸೆಗಳ ಕಲ್ಪನೆಯಲಾದರೂ ಸಾಕಾರಗೊಳಿಸಿ ಖಾಲಿ ಹಾಳೆಯ ಮೇಲೆ ಗೀಚಲು ಸಹಕರಿಸು 💠 ಹರಿವ ನದಿಯಂತೆ ಉತ್ಸಾಹ ಉಕ್ಕಿಸು ಒದ್ದೆ ಕಣ್ಣ ಒರೆಸಿ ಕನಿಕರಿಸು 💠 ಬರೆವ ಶಬ್ದಭಾವ ಮೆಲ್ಲನಿಳಿಸು ಮುಗ್ಧ ಮಗುವಾಗಿ ಅವತರಿಸು 💠 ಸವಿಮಾತ ಹೊಂದಿಸಿ ಮನದ ಕನ್ನಡಿ ಬಿಂಬಿಸು ಕವಿತೆ ಯಾಗಿ ಅರಳಿ ಅಲಂಕರಿಸು 💠
re1
like90
WhatsApp
img
ಸಾಹಿತ್ಯಾಭಿಮಾನಿ
✍️ 💯ಶತಕ ಸಂಭ್ರಮ 'ಕೂ' ನೂರು ತಲುಪಿತು 👍 ಹೃದಯ ಭಾರವಾಯಿತು❤️ ಸಾವಿರಾರು ಕೈಗಳು ಒತ್ತಿದವು ಲೈಕು👌 ನೂರಾರು ಗೆಳೆಯರ ಕಮೆಂಟ್ಸ್🤝 ಟ್ರೆಂಡ್ ಆಗಿದ್ದು ಅದೆಷ್ಟೋ 👏 ಗಿಡ ಮರ ಹೂಗಳೆ 💐 ಸ್ಫೂರ್ತಿ 🎄 ಸೂರ್ಯ ಚಂದ್ರ 🌞🌙 ತಾರೆ ⭐️ವರ್ಷಧಾರೆ ಹಿನ್ನೆಲೆ 💦ರಾಧಾ ಕೃಷ್ಣರೇ ಪಾತ್ರಧಾರಿಗಳು 😘😍 ವ್ಯಾಕರಣ ದೋಷಮನ್ನಿಸಿ ಬಾಲಿಶ ಬರಹ ಕವಿತೆ ✍️ ಸಂಗೀತ ಛಾಯಾಚಿತ್ರ 🎶 ಮೆಚ್ಚಿದಿರಿ🤝 ನಿಮಗೆಲ್ಲ ಅನಂತ ನಮನ 🙏🙏🙏 ಹೀಗೆ ಸಾಗಲಿ ನನ್ನ ಕೂ ಪಯಣ 👣
re1
like92
WhatsApp
img
ಸಾಹಿತ್ಯಾಭಿಮಾನಿ
🌺ಕುಸುಮ ರಾಶಿ🌺 ಮತ್ತೊಮ್ಮೆ ಮಗದೊಮ್ಮೆ ಹೂ.. ಲೋಕಕೆ ಲಗ್ಗೆ ಇಡುವ ಮಹದಾಸೆ 💅 ಕಿಲಕಿಲ ನಗುವ ಗೊಂಚಲುಗಳ ಬಾಚಿ ತಬ್ಬಿ ಮುದ್ದಾಡುವ ಒಲವಿನಾಸೆ 💅 ಅರಳಿದ ಪುಷ್ಪ ದೇವರ ಸನ್ನಿಧಿಗೆ ಅರ್ಪಿಸುವ ಭಕ್ತಿ ಭಾವ ದಾಸೆ💅 ನಾಗರ ಜಡೆ ತುಂಬಾ ಮಾಲೆ ಮುಡಿದು ಮನೆ ತುಂಬಾ ಓಡಾಡುವ ಚೆಲುವಾಸೆ💅 ಘಮ ಘಮದ ಹೂ ಬುಟ್ಟಿಯ ತಲೆಮೇಲಿಟ್ಟು ಹೂವಾಡ ಗಿತ್ತಿಯಾಗಿ ಕೂಗುವಾಸೆ 💅 ಹೂವಿನೊಳಗೆ ಕೆಳೆದುಹೋಗಿ ಭ್ರಮರದಂತೆ ಹಾಡಿ ಕುಣಿವ ಹುಚ್ಚು ಆಸೆ💅 🌺🌺🌺🌺🌺
re3
like94
WhatsApp
img
ಸಾಹಿತ್ಯಾಭಿಮಾನಿ
ಸೆಂಟ್ರಲ್ ಸಿಲ್ಲಬಸ್ ಓದುವ ಪುಟ್ಟು ತನ್ನ ಮಿಸ್ "ವೆಂಕಟೇಶ್ವರಾ... "ಎಂದು ಹಾಜರಿ ಕರೆವಾಗ ಒಳಗೊಳಗೇ ಮುಸಿ ಮುಸಿ ಸಿಟ್ಟು.. ಮಮ್ಮಿ ಯಾಕಿಷ್ಟು ಹಳೇ ಹೆಸರಿಟ್ರು🤔 ಇಂಜಿನಿಯರಿಂಗ್ ಓದುವ ಮಾಡ್ರನ್ ಹುಡುಗಿಗೆ ಪಪ್ಪಾ ಯಾಕೆ ಈ ಲಗ್ಜುರಿ ಕಾರ್ ಗೆ "ಪದ್ಮಾವತಿ " ಅಂತಾ ಹಳೇ ಬೈಕ್ ನ ಹೆಸರಿಟ್ಟ 🤔 ಪಾಪ ಇಬ್ರಿಗೂ ಗೊತ್ತಿಲ್ಲ ಮದುವೆಗೆ ಮುಂಚೆ ಅಮ್ಮನಿಗೊಬ್ಬ ಪ್ರಾಣಸ್ನೇಹಿತ, ಅಪ್ಪನಿಗೊಬ್ಬಳು ಜೀವದ ಗೆಳತಿ ಇದ್ದಳೆಂದು 😘❤️😍 ಫ್ರೆಂಡ್ಸ್ ನನಗೂ ಗೊತ್ತಿರ್ಲಿಲ್ಲ ಬರೆಯೋ ಮುನ್ನ🤭😊
re
like48
WhatsApp
img
ಸಾಹಿತ್ಯಾಭಿಮಾನಿ
ಏಕಾಂತೆ💇‍♀️ ಒಬ್ಬಳೇ... ಇವಳಿಲ್ಲಿ ತಬ್ಬಿಬ್ಬು ಗೊಂಡಿಹಳು ಮತ್ತೆ ಕೆಣಕುತಿದೆ ಅದೇ..ಹಳೆರಾಗ ಒಂಟಿತನ... ಬಾಳ ದಾರಿಯಲಿ ಕಿರುಬೆರಳ ಬೆಸೆದು ಜಂಟಿ ನಡೆವ ಕನಸಲಿ ಉದಯಾಸ್ತದಲಿ ಕಾದು ಪ್ರತಿದಿನ.. ಎಲ್ಲರೊಡನಿದ್ದು ಏನೋ ಕಳೆದುಕೊಂಡಂತೆ ಭಾಸ ಇಂದೇಕೋ ಬೇಕೆನಿಸಿದೆ ಅವನ ಸಹವಾಸ.. ವಾಸ್ತವದಿ ಬಂಧಿಸಿಹ ಬದುಕ ಮರೆತಿಹಳು ಮೌನ ಮೆರೆವ ಮರಳ ಬಿಸಿತೀರದಿ ಏಕಾಂಗಿ ತಾನಾಗಿ ಕೂತಿಹಳು...
re
like54
WhatsApp
img
ಸಾಹಿತ್ಯಾಭಿಮಾನಿ
#ನಾಡಹಬ್ಬ ಮೈಸೂರು ದಸರಾ ಆಳವಾಗಿ ಬೇರೂರಿರುವ ನಮ್ಮ ಸಂಸ್ಕೃತಿಯ ಪ್ರತೀಕ. ತಾಯಿ ಚಾಮುಂಡೇಶ್ವರಿ ರಾಜ್ಯವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತಾಳೆ ಮತ್ತು ಕನ್ನಡಿಗರನ್ನು ಒಟ್ಟಿಗೆ ಇರಿಸುತ್ತಾಳೆಂಬ ಧೃಡ ನಂಬಿಕೆ ಕನ್ನಡಿಗರದ್ದು. ನಾಡ ಹಬ್ಬ ಆಚರಣೆ ರಾಜ್ಯ ಏಕೀಕರಣ ಆಂದೋಲನದಲ್ಲಿ ಮುಖ್ಯ ಪಾತ್ರ ವಹಿಸಿದ್ದು ಇತಿಹಾಸ. ಹತ್ತು ದಿನಗಳ ಕಾಲ ಶಕ್ತಿ ಸ್ವರೂಪಿಣಿಯ ಆರಾಧನೆ, ದಸರೆಯ ದಿನ ದುಷ್ಟರ ಶಕ್ತಿಗಳು ಮೇಲೆ ಸಾಧಿಸಿದ ವಿಜಯದ ಸಂಭ್ರಮಾಚರಣೆ ಇವೆಲ್ಲ ನೀಡುವ ಸಂದೇಶ ಸ್ಪಷ್ಟ. ದಸರಾ ಶುಭಾಶಯ 💐
re1
like54
WhatsApp
ask