koo-logo
Backback
ಕರ್ನಾಟಕ ಕಾಂಗ್ರೆಸ್
backblock

ಕರ್ನಾಟಕ ಕಾಂಗ್ರೆಸ್ badge_img

@inckarnataka

Political Party

ಕನ್ನಡದಲ್ಲಿ ಕೂ ಮಾಡಿ

calenderhttp://kooapp.com/profile/inckarnataka

calender Joined on Aug 2020

KooKooKoo(3266)
LikedLikedLiked
Re-Koo & CommentRe-Koo & CommentRe-Koo & Comment(2)
@inckarnataka

Political Party

ಸಿಂದಗಿ ಹಾಗೂ ಹಾನಗಲ್ ಕ್ಷೇತ್ರದ ಮತದಾರ ಬಂಧುಗಳೇ, ತಾವು ಇಡೀ ದೇಶಕ್ಕೆ ಒಂದು ಸಂದೇಶ ನೀಡಬಹುದಾದ ಸುವರ್ಣಾವಕಾಶ ಒದಗಿ ಬಂದಿದೆ. ಕೆಪಿಸಿಸಿ ಅಧ್ಯಕ್ಷರಾದ @dkshivakumar_official ಅವರ ಮಾತಿನಂತೆ, ಬಿಜೆಪಿಯವರ ಹಳೆಯ ಆಶ್ವಾಸನೆಗಳನ್ನು, ಅವರಿಗೆ ನೆನಪಿಸುವ ಸದಾವಕಾಶ ನಿಮ್ಮದು, ನಿಮ್ಮಿಂದಲೇ ಬದಲಾವಣೆಯ ಕ್ರಾಂತಿ ಆರಂಭವಾಗಲಿ!
play
commentcomment
2
@inckarnataka

Political Party

ಪೆಟ್ರೋಲ್-ಡೀಸೆಲ್, ಎಲ್‌ಪಿಜಿ ನಿರಂತರ ಬೆಲೆ ಏರಿಕೆ ಪರಿಣಾಮ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ಬೆಲೆ ಏರಿಕೆಯ ಪ್ರಹಾರ ಜನರನ್ನ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರಗಳಿಗೆ ಕನಿಷ್ಟ ಬದ್ಧತೆ ಇದ್ದರೆ ಇಂಧನ ತೈಲಗಳ ಮೇಲಿನ ತೆರಿಗೆ ಕಡಿತ ಗೊಳಿಸಿ, ಬೆಲೆಯೇರಿಕೆಗೆ ಕಡಿವಾಣ ಹಾಕಲಿ.
commentcomment
1
@inckarnataka

Political Party

ಆಂತರಿಕ ಕಿತ್ತಾಟ, ಖಾತೆ ರಂಪಾಟ, ನಾಯಕತ್ವ ಬದಲಾವಣೆ, ಉಪಚುನಾವಣೆಗಳಲ್ಲಿ ಕಾಲ ಕಳೆದ ಬಿಜೆಪಿ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ‘ಶೂನ್ಯ ಸಂಪಾದನೆ‘ ಮಾಡಿದೆ. ವಸತಿ, ಆರೋಗ್ಯ ಸೇರಿದಂತೆ ಹಲವು ಇಲಾಖೆಗಳಲ್ಲಿ ₹21,331 ಕೋಟಿ ಅನುದಾನ ಬಳಕೆಯಾಗಲಿಲ್ಲ, ಯಾವ ಯೋಜನೆಯಲ್ಲೂ ಪ್ರಗತಿ ಇಲ್ಲ. ಇದನ್ನು ‘ಡಕೋಟಾ ಸರ್ಕಾರ‘ ಎನ್ನದೆ ಇನ್ನೇನು ಹೇಳಬೇಕು!?
commentcomment
2
@inckarnataka

Political Party

ಹುಬ್ಬಳ್ಳಿ ವಿಮಾನ ನಿಲ್ದಾಣವೂ ಈಗ ಮಾರಾಟಕ್ಕಿದೆ! ಕೇಂದ್ರ ಬಿಜೆಪಿ ಸರ್ಕಾರದ ಸೇಲ್ ಇಂಡಿಯಾ ಯೋಜನೆಗೆ ಹೊಸದಾಗಿ 13 ವಿಮಾನ ನಿಲ್ದಾಣಗಳು ಸೇರಿಕೊಂಡಿವೆ. ದೇಶದ ಸಾರ್ವಜನಿಕ ವಲಯದ ಪ್ರತಿಷ್ಠಿತ ಸಂಸ್ಥೆಗಳು, ರಸ್ತೆ, ರೈಲ್ವೆ, ವಿಮಾನ ನಿಲ್ದಾಣಗಳ ಮಾರಾಟವೇ ಮೋದಿಯವರು ಹೇಳಿದ ಅಚ್ಚೇದಿನ್‌ನ ವಿಕಾಸವೇ?
commentcomment
1
@inckarnataka

Political Party

ರಾಜ್ಯಸಭಾ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ, ವಿಧಾನಸಭಾ ವಿಪಕ್ಷ ನಾಯಕರಾದ ಸಿದ್ಧರಾಮಯ್ಯ ಅವರು ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಬೃಹತ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರ ಪರ ಮತ ಯಾಚಿಸಿದರು.
commentcomment
1
@inckarnataka

Political Party

ಹುಸಿ ರಾಷ್ಟ್ರೀಯತೆ ಎಲ್ಲಾ ಹೇಡಿ ಸರ್ವಾಧಿಕಾರಗಳ ಕೊನೆಯ ಆಶ್ರಯ. ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ನುಣುಚಿಕೊಳ್ಳಲು ಮೋದಿ ಸರ್ಕಾರ ನಡೆಸಿದ ಪ್ರಯತ್ನಗಳ ಹೊರತಾಗಿಯೂ ಪೆಗಾಸಸ್‌ ದುರ್ಬಳಕೆಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ ತಜ್ಞರ ಸಮಿತಿ ರಚನೆ ಆದೇಶವನ್ನು ಸ್ವಾಗತಿಸುತ್ತೇವೆ. ಸತ್ಯಮೇವ ಜಯತೆ! - ರಣಧೀಪ್ ಸಿಂಗ್ ಸುರ್ಜೇವಾಲಾ #ModiSpyScandal
commentcomment
3
@inckarnataka

Political Party

🔻 ಸರ್ಕಾರದ ತೆರಿಗೆ ’ದಾಳಿ’ 🔻 ಎಲ್ಲೆಲ್ಲೂ ಬೆಲೆ ಏರಿಕೆಯ ’ಹಾವಳಿ’ 🔻 ಜನರ ಬದುಕು ’ದಿವಾಳಿ’ 🔻 ಬೆಳಕಾಗದ ’ದುಬಾರಿ ದೀಪಾವಳಿ’! ಸಾಗಾಟ, ಪ್ರಯಾಣ, ಅಗತ್ಯ ವಸ್ತುಗಳೆಲ್ಲವೂ ಜನತೆ ಬದುಕಲಾಗದಷ್ಟು ದುಬಾರಿಯಾದರೂ ಬಿಜೆಪಿ ಸರ್ಕಾರ ಕಣ್ಣು, ಕಿವಿ ಮುಚ್ಚಿಕೊಂಡಿದೆ, ಬಿಜೆಪಿ ನಾಯಕರ ಭಂಡತನದ ಸಮರ್ಥನೆ ನೋಡಿದರೆ ಇನ್ನಷ್ಟು ಮಾರಕ ದಿನಗಳು ಬರುವುದು ನಿಶ್ಚಿತ.
commentcomment
1
@inckarnataka

Political Party

ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ನಡುವಿನ ಸಮನ್ವಯದ ಕೊರತೆ ಸಾರ್ವಜನಿಕರ ಪ್ರಾಣಕ್ಕೇ ಕುತ್ತು ತರುತ್ತಿದೆ. ಬೆಂಗಳೂರಿನ ರಸ್ತೆಗಳ ಅಪಾಯಕಾರಿ‌ ಗುಂಡಿಗಳನ್ನು ಮುಚ್ಚುವುದು ಯಾರ ಜವಾಬ್ದಾರಿ ಎಂಬ ಬಗ್ಗೆ ಅಧಿಕಾರಿಗಳೇ ಗೊಂದಲದಲ್ಲಿದ್ದಾರೆ. ಭ್ರಷ್ಟಾಚಾರವನ್ನೇ ಉಸಿರಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ಜನರ ಜೀವದ ಬಗ್ಗೆ ಕನಿಷ್ಟ ಕಾಳಜಿಯೂ ಇಲ್ಲ.
commentcomment
2
@inckarnataka

Political Party

ನಮ್ಮ ಯೋಜನೆಗಳನ್ನು ಬಿಜೆಪಿ ಅದೆಷ್ಟೇ ಟೀಕಿಸಿದರೂ, ಸ್ಥಗಿತಗೊಳಿಸಿದರೂ, ದ್ವೇಷಿಸಿದರೂ ಜಾರಿಗೊಳಿಸಲೇಬೇಕಾದ ಅನಿವಾರ್ಯತೆ ಬರುತ್ತದೆ, ಏಕೆಂದರೆ ಕಾಂಗ್ರೆಸ್‌ನ ಯೋಚನೆ, ಯೋಜನೆಗಳು ಸದಾ ಜನಪರ ಹಾಗೂ ಪ್ರಸ್ತುತವಾಗಿರುತ್ತವೆ. ಪಶು ಸಾಕಣೆದಾರರಿಗೆ ವರವಾಗಿದ್ದ ’ಅನುಗ್ರಹ’ವನ್ನು ಸ್ಥಗಿತಗೊಳಿಸಿದ್ದವರು ಮತ್ತೆ ಚಾಲನೆ ಕೊಟ್ಟಿದ್ದು ಸ್ವಾಗತಾರ್ಹ.
commentcomment
@inckarnataka

Political Party

ಸತತ ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿ ಕೇಂದ್ರ ಸಂಪುಟದ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ, ಉಪ ರಾಷ್ಟ್ರಪತಿಗಳಾಗಿಯೂ ಸೇವೆ ಸಲ್ಲಿಸಿದ, ಮಾಜಿ ರಾಷ್ಟ್ರಪತಿಗಳಾದ ಕೆ.ಆರ್ ನಾರಾಯಣನ್ ಅವರ ಜನ್ಮದಿನದಂದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತೇವೆ.
commentcomment
1
create koo