koo-logo
Backback
H D Kumaraswamy
backblock

H D Kumaraswamy badge_img

@h_d_kumaraswamy

Statesman

ಹೆಮ್ಮೆಯ ಕನ್ನಡಿಗ | Former Chief Minister of Karnataka

calender Joined on Sep 2020

KooKooKoo(278)
LikedLikedLiked(10)
Re-Koo & CommentRe-Koo & CommentRe-Koo & Comment(2)
ಗುಬ್ಬಿ ತಾಲೂಕಿನ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡು ಯುವ ನಾಯಕ ಶ್ರೀ ಬಿ.ಎಸ್.ನಾಗರಾಜು ಮತ್ತಿತರೆ ಮುಖಂಡರನ್ನು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡೆ. #ಜೆಡಿಎಸ್ #ಜನತಾಪರ್ವ
commentcomment
5
ಇಂದು ಬೆಳಗ್ಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಜಗದ್ಗುರು ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳವರ ಆಶೀರ್ವಾದ ಪಡೆದೆ. #ಸುತ್ತೂರು_ಮಠ
commentcomment
5
ಕನ್ನಡ ನಾಡಿನ ಮಹಾನ್‌ ಸ್ಫೂರ್ತಿ, ಆಂಗ್ಲರನ್ನು ಸೆದೆಬಡಿದು ಘರ್ಜಿಸಿದ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯ ಈ ಪುಣ್ಯದಿನದಂದು ಆ ಅಜರಾಮರ ವೀರರಾಣಿಗೆ ನನ್ನ ಶ್ರದ್ಧಾಪೂರ್ವಕ ನಮನಗಳು.
commentcomment
4
ಸಿಂಧಗಿ ವಿಧಾನಸಭೆ ಕ್ಷೇತ್ರದ ಅಲಮೇಲ ಗ್ರಾಮದಲ್ಲಿ ಜೆಡಿಎಸ್‌ ಅಭ್ಯರ್ಥಿ ಶ್ರೀಮತಿ ನಾಜಿಯಾ ಶಕೀಲಾ ಅಂಗಡಿ ಅವರ ಪರ ಪ್ರಚಾರ ನಡೆಸಿದೆ. ಅಲ್ಲಿನ ಜನತೆ ಪಕ್ಷದ ಮೇಲೆ ತೋರುತ್ತಿರುವ ಪ್ರೀತಿ, ವಿಶ್ವಾಸಕ್ಕೆ ನನ್ನ ಹೃದಯ ತುಂಬಿ ಬಂದಿದೆ.
commentcomment
7
ನಾಡಿನ ರಕ್ಷಣೆ ಮತ್ತು ಜನರ ಭದ್ರತೆಗಾಗಿ ಕರ್ತವ್ಯ ನಿರ್ವಹಿಸುವಾಗ ತಮ್ಮ ಅಮೂಲ್ಯ ಜೀವವನ್ನೇ ಅರ್ಪಣೆ ಮಾಡಿದ ಎಲ್ಲ ಪೊಲೀಸ್ ಅಮರ ವೀರರಿಗೆ ನನ್ನ ಶ್ರದ್ಧಾಪೂರ್ವಕ ಸಮನಗಳು. ನಿಮ್ಮ ತ್ಯಾಗ-ಬಲಿದಾನ ನಮಗೆ ಸದಾ ಪ್ರೇರಣೆ.
commentcomment
2
20 Oct
ರಾಮಾಯಣ ಮಹಾಕಾವ್ಯವನ್ನು ರಚಿಸಿ ರಾಮತತ್ತ್ವವನ್ನು ಜಗತ್ತಿಗೆಲ್ಲ ಪಸರಿಸಿದ ಮಹಾಕವಿ, ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯಂದು ಆ ಪುಣ್ಯಪುರುಷನಿಗೆ ನನ್ನ ಶ್ರದ್ಧಾಭಕ್ತಿಯ ನಮನಗಳು. ನಾಡಿನ ಸಮಸ್ತ ಜನತೆಗೆ ಶ್ರೀ ವಾಲ್ಮೀಕಿ ಜಯಂತಿ ಶುಭಾಶಯಗಳು.
commentcomment
3
19 Oct
ನಾಡಿನ ಎಲ್ಲ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು. ಅಂಧಕಾರವನ್ನು ಅಳಿಸಿ ಹೊಸ ಬೆಳಕು ತೋರುವ ಈ ಪವಿತ್ರ ದಿನವು ಎಲ್ಲರಿಗೂ ಶುಭವನ್ನುಂಟು ಮಾಡಲಿ ಹಾಗೂ ಶಾಂತಿ, ಸೌಹಾರ್ದತೆ, ಸೋದರತ್ವಕ್ಕೆ ಪ್ರೇರಣೆಯಾಗಲಿ ಎಂದು ಪ್ರಾರ್ಥಿಸುತ್ತೇನೆ.
commentcomment
3
19 Oct
ಯಾವುದೇ ಕಾರಣಕ್ಕೂ ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಪ್ರಸಾರ ಆಗುತ್ತಿರುವ ಪ್ರಾದೇಶಿಕ ಕಾರ್ಯಕ್ರಮಗಳು ನಿಲ್ಲಬಾರದು, ಕಲಬುರಗಿ ಸೇರಿ ಯಾವುದೇ ಭಾಗದಲ್ಲಿರುವ ಪ್ರಾದೇಶಿಕ ಪ್ರಸಾರ ಕೇಂದ್ರಗಳನ್ನು ಮುಚ್ಚಬಾರದು ಎನ್ನುವುದು ನನ್ನ ಒತ್ತಾಯವಾಗಿದೆ. 5/5 #ಹಿಂದಿಹೇರಿಕೆನಿಲ್ಲಲಿ
commentcomment
1
19 Oct
ದೇಶ ಭಾಷೆಗಳಲ್ಲಿ ಒಂದಾದ ಹಿಂದಿಯನ್ನೇ ಉಳಿಸಿ ಬೆಳೆಸುವ ಹಾಗೂ ಅದನ್ನೇ ಕನ್ನಡಿಗರ ಮೇಲೆ ಹೇರುವ ಏಕೈಕ ದುರಾಲೋಚನೆಯಿಂದ ಸಾವಿರಾರು ವರ್ಷಗಳ ಘನ ಇತಿಹಾಸವುಳ್ಳ ಅಭಿಜಾತ ಭಾಷೆ ಕನ್ನಡವನ್ನು ಕಡೆಗಣಿಸಿ, ಮೂಲೋತ್ಪಾಟನೆ ಮಾಡಲು ಕೇಂದ್ರ ಸರಕಾರ ಈ ಮೂಲಕ ಹೊಂಚು ಹಾಕಿರುವುದು ಗೊತ್ತಾಗುತ್ತದೆ. 4/5
commentcomment
1
19 Oct
ಈಗಾಗಲೇ ಡಿಡಿ, ಆಕಾಶವಾಣಿಯ ಒಂದೊಂದೇ ಪ್ರಾದೇಶಿಕ ಕಾರ್ಯಕ್ರಮ ಸ್ಥಗಿತಗೊಳಿಸಿದ ನಂತರ ಪ್ರಾದೇಶಿಕ ಪ್ರಸಾರ ಕೇಂದ್ರಗಳನ್ನೂ ಮುಚ್ಚುವ ಹುನ್ನಾರ ನಡೆಸಿದೆ. ಅಕ್ಟೋಬರ್‌ 31ರಿಂದ ಕಲಬುರಗಿ ಪ್ರಾದೇಶಿಕ ಕೇಂದ್ರಕ್ಕೂ ಬೀಗ ಜಡಿಯಲು ಪ್ರಸಾರ ಭಾರತಿ ಹೊರಟಿದೆ. ಇದು ಕನ್ನಡ ವಿರೋಧಿ ನಡೆ, ಪ್ರಾದೇಶಿಕ ಭಾಷೆಗಳಿಗೆ ಚರಮಗೀತೆ ಹಾಡುವ ದಮನ ನೀತಿ. 3/5
commentcomment
1
create koo