backBS Yediyurappaback

BS Yediyurappa

@bsybjp

Politician

Chief Minister of Karnataka.

calender Aug 2020 ನಲ್ಲಿ ಸೇರಿಕೊಂಡರು

ಕೂಸ್ (33)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
Politician
ಇಂದು ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಲಾಯಿತು. ಇನ್ನೊಂದು ವರ್ಷದ ಒಳಗಾಗಿ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡುವ ನಿರೀಕ್ಷೆಯಿದ್ದು, ಇದರಿಂದ ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ. ಸಂಸದರು, ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
re1
like15
WhatsApp
img
Politician
ಇಂದು ಶಿಕಾರಿಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರು, ತೋಟಗಾರಿಕೆ ಮತ್ತು ಪೌರಾಡಳಿತ ಸಚಿವರು, ಲೋಕಸಭಾ ಸದಸ್ಯರು, ಶಾಸಕರುಗಳು, ಗಣ್ಯರು ಉಪಸ್ಥಿತರಿದ್ದರು‌.
comment
re
like12
WhatsApp
img
Politician
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಇಂದು ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ವಿಧ್ಯುಕ್ತ ಚಾಲನೆ ನೀಡಲಾಯಿತು. ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ ಸಿ.ಎನ್.ಮಂಜುನಾಥ್ ದಸರಾ ಉದ್ಘಾಟನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಆರು ಕೊರೋನಾ ಯೋಧರನ್ನು ಸನ್ಮಾನಿಸಲಾಯಿತು. ಸಚಿವರು, ಸಂಸದರು, ಶಾಸಕರು, ಅಧಿಕಾರಿಗಳು ಉಪಸ್ಥಿತರಿದ್ದರು.
comment
re1
like12
WhatsApp
img
Politician
ನಾಡು ಕಂಡ ಬಹುಮುಖಿ ಪ್ರತಿಭೆ, ತಮ್ಮ ವೈವಿಧ್ಯಮಯ ಕೃತಿಗಳಿಂದ ಕನ್ನಡಸಾಹಿತ್ಯವನ್ನು ಶ್ರೀಮಂತಗೊಳಿಸುವ ಜೊತೆಗೆ ಯಕ್ಷಗಾನ, ಬಯಲಾಟಗಳಲ್ಲಿ ಪರಿಣಿತಿ, ಸಾಮಾಜಿಕವಾಗಿ ಸಕ್ರಿಯರಾಗಿ ಅಚ್ಚಳಿಯದ ಛಾಪು ಬಿಟ್ಟುಹೋಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಪದ್ಮಭೂಷಣ ಡಾ. ಶಿವರಾಮ ಕಾರಂತರ ಜಯಂತಿಯಂದು ಅವರಿಗೆ ನಮ್ಮ ಗೌರವಪೂರ್ವಕ ಪ್ರಣಾಮಗಳನ್ನು ಸಲ್ಲಿಸೋಣ.
re
like17
WhatsApp
img
Politician
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಆರ್.ಬೊಮ್ಮಾಯಿ ಅವರ ಪುಣ್ಯತಿಥಿಯಂದು ಅವರಿಗೆ ಅನಂತ ಪ್ರಣಾಮಗಳು. ತಾವು ನಂಬಿದ ತತ್ವ ಸಿದ್ಧಾಂತಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳದೆ ಪಕ್ಷ ಸಂಘಟನೆ, ಜನಸೇವೆಗಳನ್ನು ನಡೆಸಿ ಆದರ್ಶಪ್ರಾಯ ನೇತಾರರಾಗಿದ್ದ ಅವರನ್ನು ನಾಡು ಸದಾ ಸ್ಮರಿಸುತ್ತದೆ.
re
like11
WhatsApp
img
Politician
ರಾಜ್ಯದ ಅಭಿವೃದ್ಧಿಗೆ ವೇಗ ನೀಡಲು ಉತ್ತಮ ಮೂಲಸೌಕರ್ಯ ಒದಗಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಇಂದು ರಾಷ್ಟ್ರೀಯ ಹೆದ್ದಾರಿಗಳ ಮಹಾನಿರ್ದೇಶಕ ಐ.ಕೆ.ಪಾಂಡೆಯವರೊಂದಿಗೆ ರಾಜ್ಯದ ಹೆದ್ದಾರಿ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಯಿತು. ಲೋಕೋಪಯೋಗಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
comment
re
like16
WhatsApp
img
Politician
ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗುತ್ತಿರುವ 10 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ CEOಗಳೊಂದಿಗೆ ಇಂದು ಸಭೆ ನಡೆಸಿ, ಕೋವಿಡ್ ನಿಯಂತ್ರಣ ಕ್ರಮಗಳ ಕುರಿತಂತೆ ಸೂಕ್ತ ನಿರ್ದೇಶನ ನೀಡಲಾಯಿತು. ವೈದ್ಯಕೀಯ ಶಿಕ್ಷಣ ಸಚಿವರು, ಕಂದಾಯ ಸಚಿವರು, ಮುಜರಾಯಿ ಸಚಿವರು, ಮುಖ್ಯಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
comment
re1
like13
WhatsApp
img
Politician
ಪ್ರಧಾನಿ ಶ್ರೀ @narendramodi ರವರು ಹೇಳಿದಂತೆ, ಕೊರೋನಾ ಸಾಂಕ್ರಾಮಿಕದ ವಿರುದ್ಧ ನಮ್ಮ ಮುನ್ನೆಚ್ಚರಿಕೆ ಅನೇಕ ಜೀವಗಳನ್ನು ಕಾಪಾಡಿದೆ. ನಮ್ಮ ಪ್ರತಿರೋಧ ಜನಾಂದೋಲನವಾಗಬೇಕಿದ್ದು, ಕೊರೋನಾ ಯೋಧರೇ ನಮಗೆ ಪ್ರೇರಣೆಯಾಗಿದ್ದಾರೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಜೊತೆಯಾಗಿ ಮುನ್ನಡೆಯೋಣ, ಕೊರೋನಾ ಹಿಮ್ಮೆಟ್ಟಿಸೋಣ. #Unite2FightCorona
comment
re1
like11
WhatsApp
img
Politician
ಇತ್ತೀಚೆಗೆ ದೈವಾಧೀನರಾದ ಹಿರಿಯ ನಾಯಕರು, ಕೇಂದ್ರ ಸಚಿವರು, ಆತ್ಮೀಯ ಸ್ನೇಹಿತರೂ ಆಗಿದ್ದ ಶ್ರೀ ಸುರೇಶ್ ಅಂಗಡಿಯವರ ಬೆಳಗಾವಿಯ ನಿವಾಸಕ್ಕೆ ಇಂದು ತೆರಳಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿ, ಸಂತಾಪ ಸೂಚಿಸಲಾಯಿತು. ಹಿರಿಯ ಸಚಿವರುಗಳು ಜೊತೆಗಿದ್ದರು. ಶ್ರೀ ಅಂಗಡಿಯವರಿಲ್ಲ ಎಂದು ನಂಬಲಾಗುತ್ತಿಲ್ಲ, ಅವರ ಸಾಧನೆ, ಸೇವೆಗಳು ಚಿರಸ್ಮರಣೀಯವಾಗಿದೆ.
comment
re
like14
WhatsApp
img
Politician
ಸಹಕಾರ ಸಚಿವರು, ಆತ್ಮೀಯರೂ ಆದ ಶ್ರೀ ಎಸ್.ಟಿ.ಸೋಮಶೇಖರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ. @stsomashekarmla
re2
like48
WhatsApp
ask