#ಶನಿವಾರ_ಪದಗಳ_ಜಾತ್ರೆ#ನೆನಪಿನ_ಅಲೆ
ನಿನ್ನ ನೆಚ್ಚಿದ ನಾನು
ಕೊಚ್ಚಿ ಹೋಗುತಲಿರುವೆ !
ನಿನ್ನ ನೆನಪಿನ ಅಲೆಗಳಲ್ಲಿ
ಬಿರುಗಾಳಿಗೆ ಸಿಕ್ಕ ತರುಗೆಲೆಯಂತೆ !
ಒಂದು ಅಲೆಯನು ದಾಟಿ
ನಿಟ್ಟುಸಿರು ಬಿಡುವಾಗ!
ಧುತ್ತೆಂದು ಬರುತ್ತಿವೆ
ಒಂದರ ಮೇಲೊಂದರಂತೆ!
ಕಣ್ಣು ಮುಚ್ಚಲು ಸಾಕು
ಜೀಕುವವು ಜೋಕಾಲಿ !
ಆ ನಿನ್ನ ಮುಂಗುರುಳು
ತಪ್ಪಿಸುತ ನನ್ನ ಜೋಲಿ !
ಕಿವಿಯಲಿ ಮಾರ್ಧ್ವನಿಸುವದು
ನಿನ್ನ ಕಿಲ ಕಿಲ ನಗುವು !
ಮನಸಿಗೆ ಮುದ ನೀಡುವದು
ಕಾಲ್ಗೆಜ್ಜೆಯ ನಿನಾದವು!
ನಿನ್ನ ಪ್ರೀತಿಯ ಸೆಲೆ
ಸಿಟ್ಟು ಸೆಡುವಿನ ಕಲೆ !
ಎಳೆಯುತಿವೆ ನನ್ನ ನಿನ್ನತ್ತಲೇ
ನೀನಿಲ್ಲದೆ ನಾ ಜೀವಿಸಲೇ ?!
:-ಎಂಬೀಚಿ 🌹🌹
@ಸಾಹಿತ್ಯ_ಸಂಗಮ_ಬಳಗ
💐💐💐🎂🎂💐💐🍰🍰💐💐🎂🎂💐💐
#ದಿನದಕೂ@ashokjantli
ಲೈಫಲ್ಲಿ ಏನೇ ಆಗ್ಲಿ ಏನೇ ಹೋಗ್ಲಿ..
ಯಾವಾಗ್ಲು ಕಣ್ಣಲ್ಲಿ ಖುಷಿ!!
ಮನಸ್ಸಲ್ಲಿ ಹುಮ್ಮಸ್ಸು !
ಮುಖದಲ್ಲಿ ತೇಜಸ್ಸು !
ಹೊರ ಸೂಸುತಿರಲಿ !!
ನಿಮ್ಮೆಲ್ಲ #ಚಿಂತನೆಗಳ_ಮಂಥನವಾಗಿ
ನೀವು ಕಂಡ ಕನಸುಗಳೆಲ್ಲ ನನಸಾಗಲಿ!!
ಹುಟ್ಟು ಹಬ್ಬದ
ಹಾರ್ದಿಕ ಶುಭಾಶಯಗಳು 💐💐
:- ಎಂಬೀಚಿ 🌹🌹
#ಕೂ_ಕವನ_ಸಂಗಮ_ಬಳಗ
💐💐💐🎂🎂🍰🍰💐💐🎂🎂🍰🍰💐💐
#ನಾಟ್ಯಕಲೆ
ನಾಟ್ಯ ಕಲೆ ಎಲ್ಲರಿಗೂ ಬರುವದಿಲ್ಲ .ಅದು ಒಂದು
ತಪಸ್ಸು .ಕಲೆಯನ್ನು ಮೈಗೂಡಿಸಿಕೊಳ್ಳಬೇಕಾದರೆ
ಯೋಗ್ಯ ಗುರುಗಳ ಮಾರ್ಗದರ್ಶನ ಅವಶ್ಯ.
ತನು ಮನ ಸಮರ್ಪಣೆ ಮಾಡಬೇಕು.ಅದನ್ನು
ಪೂಜಿಸಬೇಕು.ಆಗ ಮಾತ್ರ ಕಲೆ ಕರಗತವಾಗುವದು.
ನನಗೆ ಯಕ್ಷಗಾನ, ಭರತ ನಾಟ್ಯ, ಕಥಕ್ಕಳಿ ,
ದೊಡ್ಡಾಟ ವೀಕ್ಷಿಸುವದರಲ್ಲಿ ಆಸಕ್ತಿ ಹೆಚ್ಚು .
#ಚಿತ್ರಕ್ಕೊಂದು_ಕವಿಯ_ಕಲ್ಪನೆ#ನಿಮ್ಮೊಳಗಿದೆ_ಅಳಿಸಲಾರದು@ಸೊನ್ನದ_ಮಲ್ಲಿಕಾರ್ಜುನ_ಪತ್ರಕರ್ತರು
ಜ್ಞಾನವೇ ನಿಜವಾದ ಶಕ್ತಿ
ವಿದ್ಯೆ ಯಾರೂ ಅಳಿಸದ ಆಸ್ತಿ !
ಇವೆರಡೂ ಬಳಸಲು ಬೇಕು
ಮನುಷ್ಯನೊಳು ಯುಕ್ತಿ !
ಎಲ್ಲರೊಳು ಅಡಗಿಹುದು
ದೈವ ದತ್ತ ವಿದ್ಯೆ ಬುದ್ಧಿ !
ಸರಿಯಾದ ಉಪಯೋಗ
ಮಾಡುವದು ಜಗದೊಳು ಸುದ್ದಿ !
ಪಡದೇ ಇದೆಯೆಂದು ಅಹಂಕಾರ
ಮಾಡಬೇಕು ಜನರಿಗೆ ಉಪಕಾರ !
ಇದುವೇ ಸರಿಯಾದ ಸಂಸ್ಕಾರ
ಮೆಚ್ಚುವರು ಆಗ ಹರಿ ಹರ !
:- ಎಂಬೀಚಿ 🌹🌹
#ಬುಧವಾರ_ಕಾವ್ಯ_ಸಂಭ್ರಮ#ನೀನಿರದ_ಈ_ಜೀವನ@ನೇಗಿಲಯೋಗಿ5050
ಸಾಗರದಲ್ಲಿ ಬಿರುಗಾಳಿಗೆ ಸಿಕ್ಕ
ದಿಕ್ಸೂಚಿಯಿಲ್ಲದ ನಿಯಂತ್ರಣ ತಪ್ಪಿದ !
ಗಾಳಿ ಎಳೆದತ್ತ ಹೋಗುವ
ಹಡಗಿನ ಸ್ಥಿತಿ ನೀನಿರದ ಈ ಜೀವನ!
ನೀರು ಗಾಳಿಯ ನಡುವೆ
ಸಿಕ್ಕು ನಲುಗುತ್ತಿರುವೆ !
ದಡ ಮುಟ್ಟುವ ಭಯದಲ್ಲಿ
ಬೆಂದು ಬೆಂಡಾಗಿರುವೆ !
ನಾವು ಕಂಡ ಕನಸುಗಳು
ಕಮರಿ ಹೋಗುವ ಶಕುನ !
ಎಲ್ಲಿ ನಿಜವಾಗುವದೋ
ಚಿಂತಿಸಿ ಹೆದರಿದೆ ಮನ !
ಆದುದೆಲ್ಲವು ಕೆಟ್ಟ
ಕನಸೆಂದು ಸರಿಸು !
ಮುಳುಗುವ ನಾವೆಗೆ
ದಿಕ್ಸೂಚಿ ನೀನಾಗು !
:- ಎಂಬೀಚಿ 🌹🌹
#ಮಂಗಳ_ಕೂ_ಅಂಗಳ#ಬದಲಾವಣೆ
ನೀರು ಹರಿಯುತ್ತಿದ್ದರೆ ಚಂದ
ಗಾಳಿ ಬೀಸುತ್ತಿದ್ದರೆ ಚಂದ !
ಜೀವನದಲ್ಲಿ ಬದಲಾವಣೆ ಚಂದ
ನಿಂತಲ್ಲೇ ನಿಂತರೆ ಕೆಡುವುದು ಅಂದ!
ಬದಲಾವಣೆ ಜಗದ ನಿಯಮ
ಅನುಸರಿಸುವದು ನಮ್ಮ ಧರ್ಮ!
ಹೊಸ ನೀತಿ ಹೊಸ ರೀತಿ
ತರುವದು ಬಾಳಿಗೆ ಕಾಂತಿ !
ಬೀಜ ಸಸಿಯಾಗುವದು
ಸಸಿ ಬಳ್ಳಿಯಾಗುವದು !
ಬಳ್ಳಿಯೊಳು ಹೂ ಹಣ್ಣು
ಆದಾಗ ಕಿತ್ತು ತಿನ್ನು !
ಬದಲಾಗುವ ಜಗದೊಂದಿಗೆ
ನಡೆಯ ಬೇಕು ನಾವೂ ಮುಂದೆ !
ನಡೆಯದಿದ್ದರೆ ಜಗವೆಲ್ಲ ಮುಂದೆ
ಉಳಿಯುವೆವು ನಾವು ಮಾತ್ರ ಹಿಂದೆ !
:- ಎಂಬೀಚಿ 🌹🌹
@mangala_koo_angala
#ಕಳೆದು_ಹೋದವರು@ಕೂ_ಕವನ_ಸಂಗಮ_ಬಳಗ
ಅಂದು ಕಳೆದು ಹೋಗಿದ್ದೆ
ನಿನ್ನ ರೂಪ ರಾಶಿಗೆ !
ಇಂದು ಕಳೆದು ಹೋಗಿರುವೆ
ಪ್ರೀತಿ ಪ್ರೇಮದ ಸೆಳುವಿಗೆ!
ಜೊತೆಯಾಗಿ ಕಳೆದ ಸಣ್ಣ ಘಳಿಗೆ
ಬುನಾದಿ ಇಂದು ನಮ್ಮ ಬಾಳಿಗೆ!
ಜೊತೆಯಾಗಿ ಇಟ್ಟ ಪ್ರತಿಯೊಂದು ಹೆಜ್ಜೆ
ಸೋಪಾನವಿಂದು ಬಾಳ ದಾರಿಗೆ!
ನೀನು ನನ್ನಲಿ ನಾನು ನಿನ್ನಲಿ
ಒಬ್ಬರೊಬ್ಬರ ಪ್ರೀತಿಯಲ್ಲಿ!
ಕಳೆದು ಹೋಗುವ ವರವ ನಮಗೆ
ಬೇಡುವಾ ಆ ಶಿವನಲಿ !
:-ಎಂಬೀಚಿ 🌹🌹
#ದಿನದಕೂ#ಪ್ರೀತಿ_ಪ್ರೇಮ
ನಮಗೆ ಯಾರೂ ಒಂದು ದಿನ
ನಮ್ಮ ಜೊತೆ ಮಾತಾಡದಿದ್ದರೂ
ಏನೂ ಅನ್ನಿಸೋದಿಲ್ಲ!
ಆದರೆ ಒಬ್ಬ ವಿಶೇಷ ವ್ಯಕ್ತಿ
ಒಂದು ದಿನ ಮೆಸೇಜ್ ಮಾಡದಿದ್ದರೆ
ಏನನ್ನೋ ಕಳೆದುಕೊಂಡಂತೆ
ಮನಸ್ಸು ಒದ್ದಾಡುತ್ತದೆ!
ಏಕೆ ...??
ಅದುವೇ ಪ್ರೀತಿ !!😊😊❤️❤️
ಶುಭಸಂಜೆ 🙏🙏
:-ಎಂಬೀಚಿ 🌹🌹