ನನ್ ಊರಲ್ಲಿ ನನ್ನ ಕಕೋಟೆ,
ಕಾಯುತಿದೆ ನನ ತಿರುಗಿ ಬರಲು...
ಇಲ್ಲಿ ಇನ್ಯಾರ ಮನೆ ಬಾಗಿಲಿಗೆ ನಾ ಕಾವಲು ?
ನನ್ ಊರಲ್ಲಿ ತುಂಬಿದ ಮೂಟೆ,
ಹಸಿ ಮಾವಿನ ಘಮಲು..
ಇಲ್ಲಿ ನನಗೆ ಇನ್ನ್ಯಾವ ಪರಿಮಳದ ತೆವಲು ?..
ನನ್ ಊರಲ್ಲಿ ಕನಸುಗಳ ಗಲಾಟೆ.
ನನ್ನನು ತೊರೆದು ಸೇರಲು ಮುಗಿಲು..
ಇಲ್ಲಿ ನನ್ನ ಕಣ್ಣ್ ತೆರೆಯಲೂ ನನಗ್ಯಾಕೆ ದಿಗಿಲು..?
“ಅಪ್ಪ“ ನೆಂದರೆ ..........!
ನಮಗೆ ಬೇಕಾದಾಗ
ಏಟಿಎಂ ಕೊಡೊ
“ಬೆಪ್ಪ“ ನಲ್ಲ.
ನಿಮ್ಮ ಬದುಕು
ಮುಳುಗುತ್ತಿರುವಾಗ
ದಡ ಸೇರಿಸುವ
“ತೆಪ್ಪ“ ಇವ.
ಕಣ್ಣಿನೊಳಗೆ ಕಸ
ಬೀಳದಂತೆ ತಡದು
ತಂಪನ್ನೆರೆಯುವ
“ರೆಪ್ಪೆ“ ಇವ.
ಬದುಕಿನ ಬಡತನವನ್ನೆಲ್ಲ
ತನ್ನೊಳಗೆ ಇಟ್ಟುಕೊಂಡು
ಶ್ರೀಮಂತಿಕೆ ನಿಮಗೆ ಕೊಡುವ
“ಸಿರಿ“ ಇವ.
ಬದುಕಿನ ಕಷ್ಟಗಳ ವಿಷವನ್ನು
ತನ್ನೊಳಗೆ ನುಂಗಿ
ನಿಮಗೆ ಸಂಜೀವಿನಿ ಪರ್ವತ ತಂದಿಡುವ
“ಚಿರಂಜೀವಿ“ ಇವ.........
“HAPPY FATHERS DAY“
ಹಗೆಯಿಂದ ಧಗ ಧಗ ಧಗಿಸುವ ಧರಣಿಯಲ್ಲಿ ಯಾರಿಗೆ ಯಾರೂ ಅಗರು, ಆಕ್ರಮಿಸಿದ ಈ ಕೆಟ್ಟ ಕ್ರಿಮಿಗೆ ಹೆದರಿ ಮನೆ ಒಳಗೆ ಅವಿತ ನಾವೆಲ್ಲ ಆ ಕ್ರಿಮಿಗಿಂತಲೂ ಸಣ್ಣ ಕ್ರಿಮಿ ಆಗಿಬಿಟ್ಟೆವಲ್ಲ ಸ್ವಲ್ಪ ಮಿಸುಕಾಡಿದರು ನಿಮ್ಮ ಜೀವಕ್ಕ ಕುತ್ತು ಬಂದುಬಿಡಬಹುದು.
-ಎಚ್ಚರಿಕೆ ಇಂದ ಇರಿ ಭಯ ಬೇಡ. 😱
-ಧೈರ್ಯದಿಂದಿರಿ ಆದರೆ ಭಂಡಧೈರ್ಯ ಬೇಡ 🧐
-ನಗುತ ಇರಿ ಹೆದರಿಕೆ ಬೇಡ.😁😂😇
ಬೇವು ಬೆಲ್ಲ ಸವಿಯುತ
ಕಹಿ ನೆನಪು ಮರೆಯಾಗಲಿ,
ಸಿಹಿ ನೆನಪು ಚಿರವಾಗಲಿ.
ಹೊಸ ದಿನಗಳಲ್ಲಿ ನೀವು ಕಂಡ ಕನಸು ನೆನಸಾಗಲಿ.
ಆ ದೇವರು ನಿಮನ್ನು ಸದಾ ಸಂತೋಷದಿಂದಿರಿಸಲಿ. 🌿🍯
🙏 ನಿಮಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಹಾಗು ಹಿಂದೂ ಧರ್ಮದ ಹೊಸವರ್ಷದ ಹಾರ್ದಿಕ ಶುಭಾಷೆಯಗಳು 🙏
ದೀಪ ಹಚ್ಚುವ ಯೋಗ್ಯತೆ ಇಲ್ಲದಿದ್ದರೆ,
ಬೆಳಗುವ ದೀಪವನ್ನು ಆರಿಸಬೇಡ.
ಮನೆ ಕಟ್ಟುವ ಯೋಗ್ಯತೆ ಇಲ್ಲದಿದ್ದರೆ,
ಮತೊಬ್ಬರ ಮನೆಯನ್ನು ಮುರಿಯಬೇಡ.
ಅನ್ನ ನೀಡುವ ಯೋಗ್ಯತೆ ಇಲ್ಲದಿದ್ದರೆ,
ಮತೊಬ್ಬರ ಅನ್ನಕ್ಕೆ ಕನ್ನ ಹಾಕಬೇಡ.
-ಬಸವಣ್ಣನವರ ಸಿದ್ಧಾಂತ.