koo-logo
koo-logo
back
ಸವಿತಾ
shareblock

ಸವಿತಾ

@ಗಡಿನಾಡ_ಕನ್ನಡತಿ

ಶಿಕ್ಷಕಿ

🌺ಹೃದಯದ ಆಳದಿಂದ ಬಂದ ಸುಂದರ ಬರಹಗಳಲ್ಲಿ ಅಡಕವಾಗಿರುವ ಸ್ನೇಹ, ವಿಶ್ವಾಸ, ಮೌಲ್ಯಗಳನ್ನು ಹುಡುಕುವ ಪ್ರವೃತ್ತಿ ನನ್ನದು.✍️ 🌺ನೋಡಿದ್ದನ್ನು, ಕೇಳಿದ್ದನ್ನು, ತೋಚಿದ್ದನ್ನು ಗೀಚುವ ನಾನು ಕನ್ನಡ ’ಕೂ’ ಕೋಗಿಲೆಗಳ ಮಧ್ಯೆ ಸಾಹಿತ್ಯದಲ್ಲಿ ಉಲಿಯುವ ಒಂದು ’ಮರಿಕೊಗಿಲೆ’🐦

Show more

calender Joined on Oct 2020

KooKooKoo(1795)
LikedLikedLiked(153850)
Re-Koo & CommentRe-Koo & CommentRe-Koo & Comment(54131)
img
#ಕನ್ನಡಕಡ್ಡಾಯ ಸುಂದರವಾದ ಕನ್ನಡ ಭಾಷೆಯನ್ನು ಅಂದಗೆಡದೆ, ವ್ಯಾಕರಣಬದ್ಧವಾಗಿ ಬಳಸುವುದನ್ನು ಪ್ರತಿಯೊಬ್ಬ ಕನ್ನಡಿಗನೂ ಮೊದಲು ಕಲಿಯಬೇಕು. ಭಾಷೆಯ ಮೇಲೆ ಪ್ರೀತಿ ಬೆಳೆಸುವ ಕಾರ್ಯ ಮನೆಯಿಂದಲೇ ಮೊದಲಾಗಬೇಕು. ಪ್ರಯತ್ನ ನಮ್ಮಿಂದಲೇ ಪ್ರಾರಂಭವಾಗಬೇಕು. ಅನಂತರ ಬೇರೆಯವರಿಗೆ ಕಡ್ಡಾಯ ಮಾಡಬೇಕು. ಇದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ. #ಸವಿತಾಸಿಂಚನ✍️ #ದಿನದಕೂ #ಕೂಬಳಗ
commentcomment
7
img
#ಒಮಿಕ್ರಾನ್ ಭಾನುವಾರ ರಾಜ್ಯದಲ್ಲಿ ಒಂದೇ ದಿನ 50,210 ಜನರು ಸೋಂಕಿತರಾಗಿದ್ದು ಬಲ್ಲ ಮೂಲಗಳ ಪ್ರಕಾರ 19 ಜನ ಮೃತಪಟ್ಟಿದ್ದಾರೆ. ಕೊರೋನಾ ಸಮುದಾಯಕ್ಕೆ ಅಂಟಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ತಪಾಸಣೆ ಮಾಡಿಸಿಕೊಳ್ಳದೆ ಮನೆಯಲ್ಲಿರುವವರು ಇನ್ನೆಷ್ಟೋ ? ಕೊರೋನಾ ವೇಗ ತೀವ್ರವಾಗಿದ್ದರೂ ಸಾವು-ನೋವಿನ ಪ್ರಮಾಣ ಕಡಿಮೆಯಾಗಿದೆ. ಕೊರೋನಾ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ,ದುಡಿದು ಬದುಕುವ ಜನಸಾಮಾನ್ಯರಿಗೆ ತೊಂದರೆಯಾಗದು ಎಂದು ಅನಿಸುತ್ತದೆ. #ಸವಿತಾಸಿಂಚನ✍️ #ದಿನದಕೂ #ಕೂಬಳಗ
commentcomment
3
img
#ಗಾನಕೋಗಿಲೆ_ಲತಾ_ಮಂಗೇಶ್ಕರ್ ಭಾಷೆಯ ಬಂಧವ ಮೀರಿ ಹಾಡಿನಲ್ಲೇ ಹೃದಯ ಸೇರಿ ಮಾಧುರ್ಯದ ಪಯಣದಲಿ ಮುಗಿಲ ಮಲ್ಲಿಗೆ ನೀನು ..! ಎಲ್ಲೆಲ್ಲೂ ನಿನ್ನದೇ ಸೊಲ್ಲು ಒಂದೊಂದು ಹಾಡೂ ಮೈಲುಗಲ್ಲು ಮರೆಯಲಾಗದ ಗೀತೆಗಳು ಸಂದ ನೂರಾರು ಬಿರುದಾವಳಿಗಳು ..! ದೇಶ ಕಂಡ ಅದ್ಭುತ ಗಾಯಕಿ ಗಾಯನಗಳ ಅಧಿನಾಯಕಿ ಭಾರತದ ನೈಟಿಂಗೇಲ್ ಹಾಡುಹಕ್ಕಿ ಸಂಗೀತ ಲೋಕದ ಭಾರತರತ್ನ ಮತ್ತೆ ಹಾಡಲಿ ಕೋಗಿಲೆ #ಗಾನಕೋಗಿಲೆ_ಲತಾ_ಮಂಗೇಶ್ಕರ್ #ಸವಿತಾಸಿಂಚನ✍️ @ಪ್ರೀತಿಯಅಲೆಮಾರಿ @ಕೂ_ಕವನ_ಸಂಗಮ
commentcomment
11
img
🌷🌱 ಶ್ರೀ ಗುರುಭ್ಯೋ ನಮ:🌱🌷 #subhashchandrabhose #indiagate ನವದೆಹಲಿಯ ಇಂಡಿಯಾ ಗೇಟ್ ಬಳಿ ಸ್ಥಾಪನೆಯಾದ ನೇತಾಜಿಯವರ ಪುತ್ತಳಿ, ದೇಶ ಕಂಡ ಅತ್ಯುನ್ನತ ಸ್ವಾತಂತ್ರ ಯೋಧ, ಭಾರತಾಂಬೆಯ ಹೆಮ್ಮೆಯ ಪುತ್ರ ನೇತಾಜಿಯವರಿಗೆ ಸಂದ ಅದ್ಭುತ ರೀತಿಯ ಗೌರವ. ದೀಪ ಎಲ್ಲಿದ್ದರೂ ತನ್ನ ಜ್ಯೋತಿಯ ಮೂಲಕ ಎಲ್ಲರ ಗಮನ ಸೆಳೆಯುತ್ತದೆ ಎಂಬುದಕ್ಕೆ ಇದು ಸಾಕ್ಷಿ. ಅಮರ್ ಜವಾನ್ ಜ್ಯೋತಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ವಿಲೀನವಾಗಲಿದೆ🇮🇳 #ಸವಿತಾಸಿಂಚನ✍️ #ದಿನದಕೂ #ಶುಭದಿನ #ಕೂಬಳಗ
commentcomment
13
img
#ನೇತಾಜಿ_ಸುಭಾಷ್_ಚಂದ್ರ_ಬೋಸ್ #ಸ್ವಾತಂತ್ರ್ಯವೀರ ”ಭಾರತಮಾತೆಯ ಆ ಕರೆಯನ್ನು ಕೇಳುವವರು ಯಾರಾದರೂ ಇರುವರೇ? ಹಿಮಾಲಯದ ಗಿರಿಶಿಖರಗಳು ಸಾಧನೆಯ ಪಾಠ ಹೇಳಲು ನಿಮ್ಮನ್ನು ಕರೆಯುತ್ತಿವೆ ” ಎನ್ನುತ್ತಾ ...... ಗುರುವಿನ ಅಲೆದಾಟದಲ್ಲಿ ಪುಣ್ಯಕ್ಷೇತ್ರ ಗಳನ್ನೂ ಸಂದರ್ಶಿಸಿದ ನೇತಾಜಿಯವರ ಬಗ್ಗೆ ಕೇವಲ 400 ಅಕ್ಷರಗಳಲ್ಲಿ ಹೇಗೆ ಹೇಳಲಿ? ನನ್ನ ನೆಚ್ಚಿನ #ಸ್ವಾತಂತ್ರ್ಯವೀರ ನೇತಾಜಿಯವರ ಬಗ್ಗೆ ಒಂದು ಕವನ ತಮಗಾಗಿ. ಆತ್ಮೀಯ ಕೂ ಬಂದುಗಳೇ ದಯವಿಟ್ಟು ಆಲಿಸಿ.👏 #ಸವಿತಾಸಿಂಚನ✍️ #ಕೂಬಳಗ
play
02:24
commentcomment
10
img
#ಕೊರೊನಾಇಳಿಕೆ ಕೊರೋನಾ ಹಾವು-ಏಣಿಯಾಟ ಆಡಲು ಶುರು ಮಾಡಿದೆ. ಮಾರ್ಚ್ ತಿಂಗಳ ವೇಳೆ ಸಂಪೂರ್ಣವಾಗಿ ಇದು ಕಡಿಮೆಯಾಗ ಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ತಪಾಸಣೆ ಮಾಡಿಸಿಕೊಂಡು ಕೊರೋನಾ ಪಾಸಿಟಿವ್ ಅಂತ ಗೊತ್ತಾದವರು ಕೂಡ ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ. ಆದರೂ ಎಲ್ಲರೂ ಕೊರೋನಾ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಾ ಎಲ್ಲರ ಜೀವನ ಮೊದಲಿನಂತಾದರೆ ಸಾಕು. #ಸವಿತಾಸಿಂಚನ✍️ #ದಿನದಕೂ #ಕೂಬಳಗ
commentcomment
6
img
#ಒಗ್ಗಟ್ಟು ಭಾರತ ಅನೇಕತೆಯಲ್ಲಿ ಏಕತೆಯನ್ನು ಹೊಂದಿರುವ,ಸನಾತನ ಸಂಸ್ಕೃತಿಯನ್ನು ಹೊಂದಿರುವ ಸುಸಂಸ್ಕೃತ ದೇಶ. ಆದರೆ ವಿಪರ್ಯಾಸವೆಂದರೆ ಇಲ್ಲಿ ಜನರಲ್ಲಿ ಒಗ್ಗಟ್ಟಿನ ಕೊರತೆ ಇರುವುದು. ಸ್ವಾತಂತ್ರ್ಯಪೂರ್ವದಿಂದಲೂ ಇದು ನಡೆದು ಬಂದ ಇತಿಹಾಸ ಇಂದಿನ ದಿನಗಳಲ್ಲಿ ಕುಟುಂಬಗಳಿಂದ ಹಿಡಿದು ಪ್ರತಿಯೊಂದು ಕ್ಷೇತ್ರದಲ್ಲೂ ಅಸಹನೆಯಿಂದ ಕೂಡಿದ ಒಗ್ಗಟ್ಟಿನ ಕೊರತೆಯನ್ನು ನಾವು ಕಾಣುತ್ತೇವೆ. ತಕ್ಕಮಟ್ಟಿಗೆ ಒಗ್ಗಟ್ಟಾಗಿ ಬದುಕುವುದು ಹಳ್ಳಿಗಳಲ್ಲಿ ಎಂದೇ ಹೇಳಬಹುದು. #ಸವಿತಾಸಿಂಚನ✍️ #ಕೂಬಳಗ
commentcomment
4
img
🌷🌱 ಶ್ರೀ ಗುರುಭ್ಯೋ ನಮಃ🌱🌷 #ಪರಾಕ್ರಮ್_ದಿವಸ್ #ನೇತಾಜಿ ಭಾರತಾಂಬೆಯ ಪುಣ್ಯ ಗರ್ಭದಲ್ಲಿ ಜನಿಸಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿರಂತರ ಹೋರಾಟ ಮಾಡಿದ,ವೀರಪುತ್ರ,ಮಹಾನ್ ಯೋಧ,ಉಜ್ವಲ ತೇಜಸ್ವಿ ಸುಭಾಷ್ ಚಂದ್ರ ಬೋಸ್ ... ಕೇವಲ 8ನೆಯ ವಯಸ್ಸಿಗೆ ಸಾಧನೆಯ ಹುಚ್ಚು __ ಒಪ್ಪೊತ್ತು ಊಟ ಚಳಿಗಾಲದಲ್ಲಿ __ ಬಟ್ಟ ಬಯಲಿನಲ್ಲಿ ಬೇಸಿಗೆಯಲ್ಲಿ __ ಕಾದ ನೆಲದ ಮೇಲೆ ಮಳೆಗಾಲದಲ್ಲಿ __ತೊಯ್ದ ಕಲ್ಲಿನ ಮೇಲೆ ಮಲಗುತ್ತಿದ್ದರು.ದುರ್ಗಾಮಾತೆಯ ಪರಮ ಭಕ್ತನ ಜಯಂತಿಯ ಶುಭಾಶಯಗಳು #ಸವಿತಾಸಿಂಚನ✍️
play
01:28
commentcomment
13
img
#ಕೂ_ಸಾಹಿತ್ಯ_ಸಂಗಮ #ಮನದಾಗೊಂದು_ಮೌನರಾಗ ಸಾಗುವ ಪಯಣದಲಿ ಮಿಡಿವ ಭಾವನೆಗಳಲಿ ನಿನ್ನ ಸವಿನೆನಪಾಗಿ ಮೀಟಿದೆ #ಮನದಾಗೊಂದು_ಮೌನರಾಗ ..! ನೀ ನುಡಿದ ಪಿಸುಮಾತಿನಲಿ ತಂಪಾದ ಬೆಳದಿಂಗಳಿನಲಿ ಸಂಭ್ರಮಿಸಿದ ನೆನಪು ಕಾಡಿದೆ #ಮನದಾಗೊಂದು_ಮೌನರಾಗ ..! ನಿನ್ನ ನವಿರಾದ ಹಾಸ್ಯ ನುಡಿವ ಪದಗಳ ಲಾಸ್ಯ ಅಕ್ಕರೆಯ ಹೃದಯವೈಶಾಲ್ಯದಲ್ಲಿ ಮುಸ್ಸಂಜೆಯ ಕವನವಾಗಿ ಮೂಡಿಬಂದಿದೆ #ಮನದಾಗೊಂದು_ಮೌನರಾಗ ..! #ಸವಿತಾಸಿಂಚನ✍️ @ಬಸವರಾಜ_ಪಿ
commentcomment
11
create koo