backನಾಗೇಶ ಜಿ. ವೈದ್ಯback

ನಾಗೇಶ ಜಿ. ವೈದ್ಯ

@ನಾನಾಗೇಶ

ಹನಿಹನಿಗವನ

ಬರೆಯೋದು ನಂಗಿಷ್ಟ

calender Aug 2020 ನಲ್ಲಿ ಸೇರಿಕೊಂಡರು

ಕೂಸ್ (78)
ಲೈಕ್ಡ್‌
ರಿ-ಕೂ ಮತ್ತು ಕಾಮೆಂಟ್
ಉಲ್ಲೇಖನ
img
ಹನಿಹನಿಗವನ
💫❤️ ಪ್ರಣಯರಾಜ❤️💫 🥰ನನ್ನ ನಲ್ಲನ ಪ್ರಣಯಕ್ಕೆ ಏನೆನ್ನಲಿ ಸಖಿ.. ಸಕ್ಕರೆ ಬದಲು ಸಿಹಿಮುತ್ತು ಕೇಳುತ್ತಾನೆ ಕಹಿಯಿದ್ದರೆ ಕಾಫಿ☕ 👩ಮತ್ತೆಂದ ಸೀತಾ-ರಾಮ ಗೌರಿ-ಶಂಕರ ರಾಧಾ-ಕೃಷ್ಣ ಎಲ್ಲೆಡೆ ದೇವಿಯರೇ ಮುಂದೆ.. ಹಾಗೆಂದೇ ನಾ ನಿನ್ನ ಹಿಂದೆ🏃🏻‍♀️🏃🏻‍♂️ 👩‍❤️‍👨ಅವನಿರಲು ಈ ನನ್ನ ಗೆಜ್ಜೆಗೂ ಲಜ್ಜೆಯಿಲ್ಲ.. ನಾ ಮೆಲ್ಲ ಹೆಜ್ಜೆ ಹಾಕಿದರೂ ಸಂಭ್ರಮದ ಸದ್ದು ಮಾಡುತ್ತಲ್ಲ📿 😎ಕನಸು ತುಂಬಿದ ಕಣ್ಣೆದುರು ಅವ ಬಂದಾಗ.. ಕೆನ್ನೆ ಕೆಂಪು ಅಧರ ಮೌನರಾಗ💞
re1
like32
WhatsApp
img
ಹನಿಹನಿಗವನ
☔☔ಆ ಮಳೆ☔☔ ⚡ಗುಡುಗು, ಸಿಡಿಲ ಆರ್ಭಟವ ಕಡೆಗಣಿಸಲು ಧರೆ.. ನೊಂದ ನಭ ತೆಪ್ಪಗೆ ಸುರಿಸಿತು ಮಳೆ⛈️ 💦ಈ ಮಳೆ ಹಿಮಪಾತ ಕೊರೆವ ಚಳಿ ನನಗಿಷ್ಟ.. ಕಾರಣ ಕೊಡೆಯಡಿ ನಾನು, ನನ್ನ ಹೃದಯೇಶ⛱️ 🌧️ಮಳೆ ಹನಿ ಕಿಟಕಿ ಗಾಜ ಮುತ್ತಿಡಲು ನನ್ನಿನಿಯಗೆ ಮೋಜು.. ಹೇಳಿದ ನಾ ಮಳೆ ನೀ ಗಾಜು😜 💦ಒಂದೊಂದು ಮಳೆ ಹನಿಗೆ ಕಾತರಿಸುತ್ತೆ ಮನ ಹಂಬಲಿಸುತ್ತೆ ಇನಿಯನ❤️ 😢ಮಳೆ ಹನಿಯ ಕಣ್ಣೀರಿಗೆ ಹೋಲಿಸುವುದ ನಾ ಒಪ್ಪೆ.. ಮಳೆ ನಿಲದೇ ಸುರಿಯುತ್ತೆ ನನ್ನ ನಲ್ಲನೆಂದೂ ಬಿಟ್ಟಿಲ್ಲ ಹನಿಗೂಡಲು ನನ್ನ ರೆಪ್ಪೆ😘🤗
re
like45
WhatsApp
img
ಹನಿಹನಿಗವನ
❤️ತ್ಯಾಗ ಮೂರ್ತಿ👩‍🦱 💫ತರಕಾರಿ ಕೊಳ್ಳಲು ಹೋಗಿ ಚಿನ್ನದಂಗಡಿಯತ್ತ ನಾ ನಡೆದರೆ ಹಬ್ಬ ಬರಲಿ ಈಗೇಕೆ ಎನ್ನುತ್ತಾಳೆ ನನ್ನ ಬಳಿ ಅಷ್ಟು ಹಣವಿಲ್ಲ ಆಕೆ ಅರಿತಿದ್ದಾಳೆ😍 🥻ಹೊಸ ಸೀರೆ ಬೇಕೆಂದು ಅಂಗಡಿಗೆ ಕರೆದೊಯ್ದು ಸೀರೆ ಕೊಳ್ಳದೇ ಶರ್ಟ್ ಕೊಡಿಸುತ್ತಾಳೆ ವರ್ಷಾವಧಿ ಹೊಸ ಬಟ್ಟೆ ಕೊಳ್ಳದ ನನ್ನ ಕಾಳಜಿ ವಹಿಸುತ್ತಾಳೆ👕 🏠ಆಗೊಮ್ಮೆ ಈಗೊಮ್ಮೆ ತವರಿಗೆ ಹೋಗುವುದೆಂದರೆ ಕುಣಿಯುತ್ತಾಳೆ ಮತ್ತೆ ನಾ ಒಂಟಿಯಾಗುವೆ ಎಂಬುದ ನೆನೆದು ಬಿಕ್ಕುತ್ತ ಹೋಗದೇ ಇದ್ದುಬಿಡುತ್ತಾಳೆ💞
re
like36
WhatsApp
img
ಹನಿಹನಿಗವನ
❤️👨ನನ್ನ ಹಮ್ಮೀರ👨❤️ 👩‍🦱ಒಡವೆ ಇರದ ನನ್ನ ಬಡವಿ ಎಂದರು.. ನಲ್ಲನ ತೋಳುಬಂದಿಯ ನನ್ನ ಐಶ್ವರ್ಯ ಅರಿಯದವರು🤗 💕ಇವನ ಸರಸವೋ ಅಬ್ಬಾ.. ಆವತ್ತು ಹೀಗೆಂದ ಹೋಳಿಯ ರಂಗು ಮೈಗೆರಚಿ ಮೈಮರೆಸಿ ಬಳಿಗೆ ಬಾ ಎನ್ನ ಮನದಂಗಳಕೆ ನಿತ್ಯ ಒಲವಿನ ಬಣ್ಣ ಬಳಿಯ ಬಾ🌈 👧🏻ಇವನೆನ್ನ ಜಡೆ ಹಿಡಿವಾಗ ಆಕಸ್ಮಾತ್ ಸೋಕಿ ಬೆರಳು.. ಹೆರಳ ಮಲ್ಲಿಗೆ ನಾಚಿ ನೀರು ನೀರು💦 🤗ನಲ್ಲನ ತೋಳುಬಂದಿ ನಡುರಾತ್ರಿ ದಾಟಲು.. ನಾ ಮುಡಿದ ಮಲ್ಲಿಗೆಗೆ ಮಂಪರು🌸 😍ಈ ನನ್ನ ರಾಜ ಪ್ರೀತಿ ಕಣಜ💃
re1
like45
WhatsApp
img
ಹನಿಹನಿಗವನ
🤱🏻ನೆನಪಾದಳು ಅಮ್ಮ🙇‍♂️ 🏤ಶಾಲೆಯಲ್ಲಿ ವಿಶ್ವದ ಏಳೂ ಅದ್ಭುತಗಳ ಬಗ್ಗೆ ಗುರುಗಳು ಹೇಳಿದಾಗ.. ನಾ ಕೇಳಿದ್ದ ಪ್ರಶ್ನೆ ಇನ್ನೂ ಮರೆತಿಲ್ಲ.. ಮೇಷ್ಟ್ರೇ ಈ ಲೀಸ್ಟಲ್ಲಿ ಅಮ್ಮ ಯಾಕಿಲ್ಲ?🤔 👨ಅಪ್ಪನ ಕೋಪಕ್ಕೆ ಹೆದರದೇ ಇರಲುಂಟೆ? ಆಗೆಲ್ಲ ಅಮ್ಮನ ಸೆರಗೇ ನನ್ನ ಭದ್ರ ಕೋಟೆ🥻 😢ಎದ್ದು ಬಿದ್ದು ಆದ ಅದೆಷ್ಟು ಗಾಯ.. ಹಣೆಯ ಮೇಲೆ ಅಮ್ಮನಿತ್ತ ಹೂ ಮುತ್ತಿಗೆ ನೋವೆಲ್ಲ ಮಾಯ🧒🏻 🥰ಇಂದೆನಿಸಿತು ಅಮ್ಮನೇ ಇರಬೇಕು ಈ ನೆರಳು.. ಸದಾ ಹಿಂಬಾಲಿಸಿ ಬರುವ ಬೆಂಗಾವಲು.. ಅಮ್ಮ ಅದೇಕೋ ನೆನಪಾದಳು🙇‍♂️
re
like54
WhatsApp
img
ಹನಿಹನಿಗವನ
🏹ರಾವಣನ ಚಿಂತೆ👺 👺ಪ್ರತೀ ದಸರೆಗೆ ನನ್ನ ಪ್ರತಿಕೃತಿ ದಹನ.. ನಿಮ್ಮ ಸಂಭ್ರಮ.. ದುಷ್ಟರ ಸಾಂಕೇತಿಕ ಹರಣ🏹 👺ಅರಿತವರಿಗೆ ಗೊತ್ತು ನನ್ನ ಭಕ್ತಿ, ಜ್ಞಾನ ಪರಾಕ್ರಮ.. ಸೀತೆ ಅಪಹರಣಕ್ಕೆ ಒಂದೇ ಕಾರಣ.. ಬಯಸಿದ್ದೆ ಎನ್ನ ಮುಕ್ತಿಗೆ ರಾಮಬಾಣ🏹 👺ಕಳಂಕ ತಂದಿರಿ ನನ್ನ ಚಾರಿತ್ರ್ಯಕ್ಕೆ ಸ್ತ್ರೀಲೋಲನಲ್ಲ ನಾನು.. ಪವಿತ್ರವಾಗಿಸೆ ರಾಕ್ಷಸರ ಲಂಕೆ ರಾಮ ಬರಲೆಂದು ಬಯಸಿದವನು🙇‍♂️ 🙏ರಾಮನಿತ್ತ ಮುಕ್ತಿ ನನಗೆ ಸಕಾಲಿಕ.. ಧರೆಯಲೀಗ ಮುಸುಕುಧಾರಿ ರಾವಣರ ಸಂಖ್ಯೆ ಭಯಾನಕ.. ನಿಂತಿಲ್ಲ ಸೀತೆಯರ ನಡುಕ👺
re1
like71
WhatsApp
img
ಹನಿಹನಿಗವನ
🤔ಏನು ಹೇಳು💃 👩‍🦱ತೆರೆದಿರುವ ಕಂಗಳಲಿ ಅದೆಂಥ ನಿರೀಕ್ಷೆ ಹೇಳು ಹುಡುಗಿ🤔 👩‍🦱ಅರಳಿದೀ ತುಟಿಯಲ್ಲಿ ಹೊರ ಬರದೆ ಸಿಕ್ಕಿಕೊಂಡಿಹ ಮಾತ ಹೇಳು ತುಡುಗಿ🤔 👩‍🦱ಅದರುತಿಹ ಬೆರಳಲೂ ಕಾಣಿಸಿದೆ ಆತಂಕ ಹೇಳು ಬೆಡಗಿ🤔 👩‍🦱ಬೇಕಿತ್ತೇ ಈ ಬೆಡಗು ಬಿನ್ನಾಣ ನೀ ಸಹಜ ಸುಂದರಿ ಮನವೇಕೆ ತಲ್ಲಣ ಹೇಳು ಹುಡುಗಿ🤔 👩‍🦱ಅರೆಕ್ಷಣ ಬಿಟ್ಟಿರದ ನಲ್ಲ ಮುನಿದಿಹನೆಂಬ ಆತಂಕವೇ ಹೇಳು ಬೆಡಗಿ🤔 👩‍🦱ಮಣಿಸಿ ಬಾಹು ಬಂಧನದಿ ಇದ್ದುಬಿಡು ಅವನ ಅರಗಿಣಿಯಾಗಿ ಸ್ಥಿರವಾಗಿ ಅವನೆದೆಯ ರಾಣಿಯಾಗಿ ಹಾಯಾಗಿ💞
re
like64
WhatsApp
img
ಹನಿಹನಿಗವನ
💁‍♂️ಕೋಪಿಸಲು ಬಿಡದವ❤️ 👨ಅಸಾಮಾನ್ಯ ನನ್ನಿನಿಯನ ತುಂಟ ನಗು ಸಮ್ಮೋಹನ.. ನನ್ನ ಕೋಪ ನಿಮಿಷದಲಿ ಶಮನ☺️ 👩‍🦱ನನ್ನ ಕೋಪಕ್ಕಿವನ ಪ್ರತಿಕ್ರಿಯೆ ಬಿಗಿಯಪ್ಪುಗೆ.. ಕುಪಿತಳಾಗುವೆ ಬಾರಿ ಬಾರಿ ಅಪ್ಪುಗೆಯ ಬಯಸಿ ಈಗಿತ್ತಲಾಗೆ🤗 😳ಕೋಪದಲ್ಲಿರೆ ಏನಾಗುತ್ತೆ ಗೊತ್ತೆ ? ನನ್ನ ಮೂಗುತಿ ಕೂಡ ಇವನೊಡನೆ ಮಾತಾಡಿ ಮೌನ ಮುರಿಯುತ್ತೆ😜 🙇‍♂️ಇವ ಕೆಣಕುವ ರೀತಿಗೆ ಸಾಟಿಯಿಲ್ಲ.. ಕೋಪದಲ್ಲಿರೆ ನೀ ಶೂರ್ಪನಖಿ.. ನಗುತಲಿರೆ ಚಂದ್ರಮುಖಿ ಅಂತಾನಲ್ಲ💕 🤝ಈ ತುಂಟಾಟಕ್ಕೆ ಶರಣಾಗದೇ ಬೇರೆ ವಿಧಿಯಿಲ್ಲ💞
re1
like50
WhatsApp
img
ಹನಿಹನಿಗವನ
💃ಮಜವೇ ಬೇರಿತ್ತು💃 🧒🏻ಶಾಲೆ ಆವರಣದಲಿ ಪ್ರಾರ್ಥನೆಯ ಸಾಲಲ್ಲಿ ಎತ್ತರದವನ ಹಿಂದೆ ಅಡಗಿ ಹುಣಸೇ ಕಾಯಿ ಮೆಲ್ಲುವ ಮಜವೇ ಬೇರಿತ್ತು👧🏻 🗓️ಹೈಸ್ಕೂಲು ಬೋರ್ಡಲ್ಲಿ ಮೇಡಮ್ಮು ಬರೆವಾಗ ಕಾಗದದ ವಿಮಾನ ಹಾರಿಸಿ ಬೆಚ್ಚು ಬೀಳಿಸೋ ಮಜವೇ ಬೇರಿತ್ತು✈️ 🏤ಕಾಲೇಜು ದಿನದಲ್ಲಿ ಪುಸ್ತಕ ಎರವಲು ಪಡೆದು ಪ್ರೇಮಪತ್ರ ಅದರೊಳಿಟ್ಟು ಹಿಂದಿರುಗಿಸಿ ಉತ್ತರಕೆ ಕಾಯೋ ಮಜವೇ ಬೇರಿತ್ತು📖 🙄ನಮ್ಮ ಕೀಟಲೆಗೆ ಹುಸಿ ಮುನಿಸ ಹಿರಿಯರು ಕೊನೆಗೂ ನಸುನಕ್ಕು ಬುದ್ದಿ ಹೇಳುವ ಮಜವೇ ಬೇರಿತ್ತು🤗 🍁💙💦🍁💙💦🍁
re
like54
WhatsApp
img
ಹನಿಹನಿಗವನ
💫ನಾ ಮಾರಾಟಕ್ಕಿಲ್ಲ💫 😢ಚರಿತ್ರಹೀನಳಲ್ಲ ನಾನು; ಸಂತ್ರಪ್ತಿ ಅರಸಿ ಬಂದಿರಿ ನೀವು💋 😭ಮಡುಗಟ್ಟಿದ ಕಣ್ಣೀರಲ್ಲಿ ಗೀರಿದ ದೇಹಕ್ಕೆ ಕಚ್ಚಿದ ಗಾಯಕ್ಕೆ ಚಿಮ್ಮಿದ ರಕ್ತಕ್ಕೆ ತೊಟ್ಟಿಯಾದ ಅಂಗಾಂಗಕ್ಕೆ ಸಾಂತ್ವನ ಹೇಳುತ್ತ ನೀವೆಸೆದ ನೋಟುಗಳ ಆರಿಸಿಕೊಳ್ಳುತ್ತೇನೆ ಸತ್ತ ಈ ದೇಹ ಉಳಿಸೋಕೆ !!💷 💅ಕಂಡಿರಾ ಕೆಂಪು ದೀಪದ ಕೆಳಗಿನ ಕತ್ತಲೆ? ನಾ ಮಾರಾಟಕ್ಕಿಲ್ಲ ನೀವೇ ಕಟ್ಟಿದ್ದೀರಿ ಬೆಲೆ ಹಾಲ ಕುಡಿವ ಕಂದ ಹಾಸಿಗೆ ಹಿಡಿದ ಗಂಡ ಇಬ್ಬರಿಗೂ ನಾ ಜೀವಸೆಲೆ ಅರಿಯೆ ನಮಗೇನು ಕಾದಿದೆಯೋ ನಾಳೆ😥
re
like79
WhatsApp
ask