koo-logo
icLanguageInActive
koo-logo
settingsetting
ನಾಡೋಜ ಡಾ ಮಹೇಶ ಜೋಶಿ photo

ನಾಡೋಜ ಡಾ ಮಹೇಶ ಜೋಶಿ
badge_img
@ನಾಡೋಜಮಹೇಶಜೋಶಿ

ಕನ್ನಡ ಪರಿಚಾರಕ
ದೂರದರ್ಶನ ಚಂದನ, ದೆಹಲಿ, ಹಾಗೂ ದಕ್ಷಿಣ ಭಾರತದ, ಹೆಚ್ಚುವರಿ ಮಹಾ-ನಿರ್ದೇಶಕರಾಗಿ ಸೇವೆ ಸಲ್ಲಿಸಿ, ದೂರದರ್ಶನ ಚಂದನದ, ಅತಿ ಜನಪ್ರಿಯ ಕಾರ್ಯಕ್ರಮವಾದ, "ಮಧುರ ಮಧುರವೀ ಮಂಜುಳಗಾನ" ದ ರುವಾರಿಯಾಗಿ, ಮುಂದೆ ದೆಹಲಿಯ ದೂರದರ್ಶನದ ಮುಖ್ಯಸ್ಥನಾಗಿ, ಮಾನ್ಯ ರಾಷ್ಟ್ರಪತಿಗಳು ಹಾಗೂ ಮಾನ್ಯ ಪ್ರಧಾನ ಮಂತ್ರಿಗಳು ಭಾಗವಹಿಸಿದ, ಎಲ್ಲಾ ಕಾರ್ಯಕ್ರಮಗಳ ನೇರಪ್ರಸಾರದ ಮೇಲ್ವಿಚಾರಣೆ ಜವಾಬ್ದಾರಿಯನ್ನು , ಅತ್ಯಂತ ಸಮರ್ಥವಾಗಿ ಹಾಗೆ ಯಶಸ್ವಿಯಾಗಿ ನಡೆಸಿ, ಪ್ರಶಂಸೆಗೆ ಒಳಗಾದ, "ಮೊದಲನೆಯ ಕನ್ನಡಿಗ". ಕನ್ನಡ ನಾಡು-ನುಡಿ-ಸಂಸ್ಕೃತಿಯ, ಸೇವೆಗಾಗಿ ಕನ್ನಡ ಹಂಪಿ ವಿಶ್ವವಿದ್ಯಾಲಯ ನೀಡಲಾಗುವ, "ನಾಡೋಜ" ಪ್ರಶಸ್ತಿಯನ್ನು , ಕಿರಿಯ ವಯಸ್ಸಿನಲ್ಲೇ ಪಡೆದು, ದಾಖಲೆ ಸೃಷ್ಟಿಸಿದ್ದೇನೆ. ಕರ್ನಾಟಕದ ಕಬೀರ ಸಂತ ಶಿಶುನಾಳ ಶರೀಫರ ಗುರುಗಳಾದ, ಕಳಸದ ಗುರು ಗೋವಿಂದಭಟ್ಟರ ವಂಶದವನಾಗಿ, ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ "ಕನ್ನಡ ಸಾಹಿತ್ಯ ಪರಿಷತ್ತಿ"ನ 2021ರಲ್ಲಿ ನಡೆಯುವ ಚುನಾವಣೆಯಲ್ಲಿ, ರಾಜ್ಯದ ಅಧ್ಯಕ್ಷ ಸ್ಥಾನಕ್ಕೆ ಒಬ್ಬ ಆಕಾಂಕ್ಷಿಯಾಗಿ ಸ್ಪರ್ಧಿಸುತ್ತಿದ್ದೇನೆ. ಕನ್ನಡ-ಕನ್ನಡಿಗ-ಕರ್ನಾಟಕಕ್ಕಾಗಿ, ಕನ್ನಡಿಗರ ಉದ್ಯೋಗ, ಕನ್ನಡಿಗರ ಬದುಕಿಗಾಗಿ, ಕನ್ನಡ ಬಳಸುವುದಕ್ಕಾಗಿ, ಬೆಳೆಸುವುದಕ್ಕಾಗಿ, ಹಾಗೂ ಉಳಿಸುವುದಕ್ಕಾಗಿ, ನನ್ನ ಜೊತೆಗೆ ತಾವೆಲ್ಲರೂ ಕೈಜೋಡಿಸಿ, ಎಂದು ವಿನಮ್ರವಾಗಿ ಪ್ರಾರ್ಥಿಸುವ, ನಾಡೋಜ ಡಾ. ಮಹೇಶ ಜೋಶಿ 9448490240...more
create koo