koo-logo
koo-logo
backKoo - Madhu GowdaGo to Feed

More Koos by this user

img
#ಕಸ್ತೂರಿ_ರಂಗನ್_ವರದಿ ಮಾಧವ ಗಾಡ್ಗೀಳ್ ವರದಿ ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಜನವಸತಿಗೆ ನಿರ್ಬಂಧ ಹೇರಲಾಗಿತ್ತು. ಕಸ್ತೂರಿರಂಗನ್ ಸಾರಥ್ಯದ ಸಮಿತಿ ಗಣಿಗಾರಿಕೆ,ಕ್ವಾರಿ,ಮರಳುಗಣಿಗಾರಿಕೆ , ಕೈಗಾರಿಕೆಗಳು,ಜಲವಿದ್ಯುತ್,ಪವನ ವಿದ್ಯುತ್ ಯೋಜನೆ ಸ್ಥಗಿತಗೊಳಿಸಬೇಕು. ರಾಸಾಯನಿಕ ಬಳಕೆ, ಜನವಸತಿ ಪ್ರದೇಶ ನಿರ್ಮಾಣಕ್ಕೆ ನಿಷೇಧ ಹೇರಬೇಕೆಂದು ಶಿಫಾರಸು ಮಾಡಿದೆ. ಈ ವರದಿಗಳ ಪರ ವಿರೋಧದ ಮಧ್ಯೆ ನಮ್ಮ ದೇಶ ಅಭಿವೃದ್ಧಿ ಕಾಣುವುದಂತೂ ಕನಸಿನ ಮಾತು. #ಸವಿತಾಸಿಂಚನ✍️
commentcomment
3
img
#ಅಜ್ಜಿಕಥೆ ಅಜ್ಜ, ಅಜ್ಜಿ ಒಂದು ಜೀವಂತ ಜ್ಞಾನಕೋಶ. ಅವರ ಕಥೆಗಳಲ್ಲಿ ತಲೆತಲಾಂತರದಿಂದ ಇರುವ ಜ್ಞಾನದ ಸಾರ ತುಂಬಿರುತ್ತದೆ. ಕಥೆಯು ಕಲ್ಪನೆಯ ಸುತ್ತ ಕೇಂದ್ರೀಕರಿಸಲ್ಪಟ್ಟಿದ್ದರೂ ಕೂಡ ನಮಗೆ ಕಾಣ ಸಿಗದ ಅವರ ಕಾಲಕ್ಕೆ ಸಂಬಂಧಪಟ್ಟಂತಹ ಅನೇಕ ವಸ್ತುಗಳ, ವ್ಯಕ್ತಿಗಳ ವಿಷಯಗಳು ಅಜ್ಜಿಯ ಕಥೆಗಳಲ್ಲಿ ಸಿಗುತ್ತವೆ. ಅಜ್ಜ-ಅಜ್ಜಿಯ ಪ್ರೀತಿ, ಮಮತೆ, ವಾತ್ಸಲ್ಯ ಸಿಗದಿರುವ ಮೊಮ್ಮಕ್ಕಳು ನಿಜವಾಗಿಯೂ ಭಾಗ್ಯಹೀನರು . #ಸವಿತಾಸಿಂಚನ✍️ #ದಿನದಕೂ #ಕೂ_ಬಳಗ
commentcomment
7
img
#ಸೋಮವಾರದ_ಕವನ_ಸಂಗಮ #ಹೇಳಲಾಗದ_ಪ್ರೀತಿ ತುಂತುರು ಮಳೆಯಂತೆ ತಂಪಾದ ಹನಿ ಸ್ಪರ್ಶಿಸಿದಂತೆ ಮನದೊಳಗೆ ಕಂಪನದಂತೆ ಅದೇ #ಹೇಳಲಾಗದ_ಪ್ರೀತಿ ..! ಪ್ರಣಯದ ಯಾನ ಅಂತರಂಗದ ಕವನ ನಲಿಯುವುದು ಮೈಮನ ಅದೇ #ಹೇಳಲಾಗದ_ಪ್ರೀತಿ ..! ಭಾವನೆಗಳು ನರ್ತಿಸಿದೆ ಹೃದಯವಾ ಆಕ್ರಮಿಸಿದೆ ಮೌನದಲೆ ಆಸ್ವಾದಿಸಿದೆ ಆದರೂ .... ಮನದಲೇನೋ ತಳಮಳ ಅದೇ #ಹೇಳಲಾಗದ_ಪ್ರೀತಿ ..! #ಸವಿತಾಸಿಂಚನ✍️ @ಪ್ರೀತಿಯಅಲೆಮಾರಿ @ವಿ.ಜಿ.ಹಿರೇಮನಿ @ashokjantli @ವಿರಾಜ್ #ಕೂ_ಬಳಗ
commentcomment
12
img
🌷ಶ್ರೀ ಗುರುಭ್ಯೋ ನಮಃ🌷 #ಗೆಳೆತನ #ಸ್ನೇಹ ಭಾಗ-6 4) ಸಹಜ ಮಿತ್ರರು -ಸ್ವಭಾವದ ಏಕತೆಯಿಂದ ಎರಡು ದೇಹ ಒಂದೇ ಪ್ರಾಣ ಎಂಬಂತೆ ಅನ್ಯೋನ್ಯತೆಯಿಂದ ಇರುವ ಸ್ನೇಹದ ನಿಜವಾದ ಅರ್ಥ ಬಲ್ಲವರು.ಇದೇ ನಿಜವಾದ ಸಂಪತ್ತು . 5) ಧರ್ಮ ದೃಷ್ಟಿಯ ಧರ್ಮ ಮಿತ್ರ - ಯಾವುದೇ ಪಕ್ಷಕ್ಕೆ ಸೇರದೇ ಇರುವ ಶ್ರೇಷ್ಠ ಮಿತ್ರ ಬಾಹ್ಯ ನೋಟದಿಂದ ಒಳಿತು-ಕೆಡುಕುಗಳನ್ನು ಅರಿಯುವುದು ಕಠಿಣವಾಗಿರುವ ಇಂದಿನ ದಿನಗಳಲ್ಲಿ ಪ್ರತಿಯೊಂದು ಹೆಜ್ಜೆಯನ್ನು ಅರಿತು ಮುಂದಿಡುವುದನ್ನು ಕಲಿಯಬೇಕು #ಸವಿತಾಸಿಂಚನ✍ 👇
commentcomment
7
img
#ಕೂ_ಕವನ_ಸಂಗಮ #ಸೋಮವಾರ_ಕವನ_ಸಂಗಮ #ಶೀರ್ಷಿಕೆ #ಹೇಳಲಾಗದ_ಪ್ರೀತಿ #ಶೀರ್ಷಿಕೆ_ಕೊಟ್ಟವರು @ವಿ.ಜಿ.ಹಿರೇಮನಿ ಹೇಳದೇ ಕೇಳದೇ ಮೂಡಿ ಬಿಡುವ ಪ್ರೀತಿಯ ಹೇಳುವುದಾದರೂ ಹೇಗೆ? ಪ್ರೀತಿಯಾದ ಮನಸ್ಸಿಗೆ ಹೇಳದಿದ್ದರೆ ಏನೋ ತಳಮಳ. ಹೇಳಿದರೆ ಮನಸ್ಸು ಒಡೆದುಹೋಗುವ ಉತ್ತರ ಸಿಗುವುದೆಂಬ ಭೀತಿ. #ಹೇಳಲಾಗದ_ಪ್ರೀತಿ ಶೀರ್ಷಿಕೆಯ ಕವನಗಳನ್ನು ಬರೆದು ನಿಮ್ಮಭಿಮಾನದ #ಕೂ_ಕವನ_ಸಂಗಮದಲ್ಲಿ ಕವನಗಳ ಬೆಳೆಸಿ ಸಂಭ್ರಮಿಸಿ. @ಪ್ರೀತಿಯಅಲೆಮಾರಿ #ಕೂ_ಕವನ_ಸಂಗಮ ಸೋಮವಾರ /ಶುಕ್ರವಾರ
commentcomment
2
img
#ಮೂಗುತಿ_ಸುಂದ್ರಿ ನೀಳ ನಾಸಿಕಕೆ ತಂದಿಹುದು ಶೋಭೆ ಸೊಗಸಾದ ಮುತ್ತಿನಾ ಮೂಗುತಿಯ ನತ್ತು ..! ನನ್ನಿನಿಯ ಬಂದು ದಂಗಾಗಿ ನಿಂತ ಮೂಗುತಿಯ ನೋಡಿ ಕ್ಷಣಹೊತ್ತು ..! ಬರಸೆಳೆದು ಅಪ್ಪಿ ಮುಂಗುರುಳ ಸರಿಸಿ ನೀಡಿದನು ಮುತ್ತಿನಾ ಮೂಗುತಿಯ ಮೇಲೊಂದು ಸವಿಮುತ್ತು ..!💞 #ಸವಿತಾಸಿಂಚನ✍️ #ಕೂಬಳಗ #ದಿನದಕೂ
commentcomment
14
img
#ವಿಶ್ವಮಣ್ಣಿನದಿನ ಸರ್ವ ಬದುಕಿನ ಮೂಲ ಮಣ್ಣು . ಸರ್ವ ನಾಗರಿಕತೆಗಳ ಆಧಾರ ಮಣ್ಣು. ನಮ್ಮನ್ನು ಜೀವಂತವಾಗಿರಿಸಿರುವುದು ಮಣ್ಣು. ಮೊದಲ ಬಾರಿ ಡಿ. 5 , 2014ರಲ್ಲಿ ಆರೋಗ್ಯಕರ ಮಣ್ಣಿನ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಯಿತು ರಾಸಾಯನಿಕ ಗೊಬ್ಬರದ ಅಸಮತೋಲನ ಬಳಕೆಯಿಂದ ಮಣ್ಣಿನ ಭೌತಿಕ ರಾಸಾಯನಿಕ ,ಜೈವಿಕ ಲಕ್ಷಣಗಳು ನಾಶವಾಗಿ ಸವಳು-ಜವಳು ಆಮ್ಲ,ಕ್ಷಾರಮಯವಾಗಿ ಬೆಳೆಗಳ ಉತ್ಪಾದನೆ ಕುಂಠಿತವಾಗುತ್ತಿದೆ. ಮಣ್ಣಿನ ಫಲವತ್ತತೆಯ ರಕ್ಷಣೆ ಅತಿ ಅಗತ್ಯ #ಸವಿತಾಸಿಂಚನ✍️
commentcomment
8
img
#ಭಾನುವಾರದ_ಸಮಾಚಾರ #ಕೂ_ಪಯಣ ’ ಕೂ ’ ಮನೆ ಭಾವನೆಗಳು ಮೇಳೈಸಿರುವ ಕುಟುಂಬ.ಅನೇಕತೆಯಲ್ಲಿ ಏಕತೆಯನ್ನು ನಾವು ಇಲ್ಲೂ ಕಾಣಬಹುದು ಕೇವಲ ’ಕೂ’ಗಳ ಮೂಲಕ ಹೃದಯಗಳು ಮಾತನಾಡುವ ಕೂ ಕುಟುಂಬದಲ್ಲಿ ಸ್ನೇಹ, ಪ್ರೀತಿ,ವಿಶ್ವಾಸ ಅನುಕಂಪ ಎಲ್ಲವನ್ನು ಕಂಡಿದ್ದೇನೆ ಕೆಲಸದ ಒತ್ತಡದ ಮಧ್ಯೆ ಬೇಡವೆಂದರೂ ಅಯಸ್ಕಾಂತದಂತೆ ಸೆಳೆಯುವ ಶಕ್ತಿ ಕೂ ಮನೆಗಿದೆ. ಇದರಲ್ಲಿ ಸುದರ್ಶನ್ ಸರ್ ಅವರ ಬಳುವಳಿ ಜಾಸ್ತಿ ಇದೆ. ಇಲ್ಲಿರುವಷ್ಟು ದಿನ ಭಾವನೆಗಳಿಗೆ ನೋವಾಗದಂತೆ ಪಯಣ ಸಾಗಲಿ. #ಸವಿತಾಸಿಂಚನ✍️ @sangam
commentcomment
14
img
🌷🌱 ಶ್ರೀ ಗುರುಭ್ಯೋ ನಮಃ🌱🌷 #ಗೆಳೆತನ #ಸ್ನೇಹ ಭಾಗ-5 ಪುರಾಣವೇ ಹೇಳುವಂತೆ ಮುಖ್ಯವಾಗಿ ಐದು ರೀತಿಯ ಗೆಳೆಯರಿದ್ದಾರೆ. 1) ಸಹಾರ್ಥ ಮಿತ್ರರು - ತಾವು ಮಾಡಿದ ಸಹಾಯಕ್ಕೆ ಪ್ರತಿಯಾಗಿ ಸಹಾಯ ಬಯಸುವವರು. 2) ಭಜವಾನ ಮಿತ್ರರು -ವಂಶ ಸಂಬಂಧದಿಂದ ಬಂದ ಗೆಳೆಯರು 3) ಕೃತ್ರಿಮ ಮಿತ್ರರು - ಮನಃಪೂರ್ವಕವಾಗಿ ಸ್ನೇಹವಿಲ್ಲದಿದ್ದರೂ ಸಂದರ್ಭಕ್ಕೆ ತಕ್ಕಂತೆ ಮಿತ್ರರಂತೆ ವರ್ತಿಸುವುದು .ಇವರೇ ತುಂಬಾ ಅಪಾಯಕಾರಿ ಶತ್ರುಗಳು . #ಸವಿತಾಸಿಂಚನ✍️ #ಶುಭದಿನ #ಕೂಬಳಗ
commentcomment
17
img
#ಕೂ_ಸಾಹಿತ್ಯ_ಸಂಗಮ #ಕಂಗಳು_ತುಂಬಿರಲು ಚಂದನವನದ ಅಂದದ ಕಲೆಗಾರ ಸ್ಪೂರ್ತಿಯ ಕಿರಣ ನಗುಮೊಗದ ಸರದಾರ ..! ಸರಳ ಸುಂದರ ನಿರಾಡಂಬರ ವ್ಯಕ್ತಿತ್ವ ಮೆಚ್ಚಿನ ಹಿರಿಯಣ್ಣ ಎಲ್ಲರ ಶಿವರಾಮಣ್ಣ ..! ನಗುತ ನಗಿಸುತ ಸಾಗಿದಿರಿ ಬಲುದೂರ ನಿಮ್ಮಗಲಿಕೆಯಿಂದ #ಕಂಗಳು_ತುಂಬಿರಲು ಅರ್ಪಿಸುವೆ ತಮಗೆ ಭಾವ ಪೂರ್ಣ ಶ್ರದ್ಧಾಂಜಲಿ ..! #ಸವಿತಾಸಿಂಚನ✍️
commentcomment
16
create koo